ಕಾಸರಗೋಡು: ಇಂಧನಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕಾಗಿ ಬರಲಿದೆ ಎಂದು ಪ್ರೈವೇಟ್ ಬಸ್ ಆಪರೇಟರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿ ಫಾರ್ಮ್ ಸಲ್ಲಿಸಿ ಬಸ್ ಸಂಚಾರ ಸಥಗಿತಗೊಳಿಸಲು ಮನವಿ ಸಲ್ಲಿಸಲು ಚಿಂತನೆ ನಡೆಸಿರುವುದಾಗಿ ತಾಲೂಕು ಸಮಿತಿ ಸಭೆಯಲ್ಲಿ ಪದಾಧಿಕಾರಿಗಳು ಸಊಚನೆ ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬಗ್ಗೆ ಸಮಿತಿ ತನ್ನ ಖಂಡನೆ ವ್ಯಕ್ತಪಡಿಸಿತು.
ಎನ್.ಎಂ ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ.ಎ ಮಹಮ್ಮದ್‍ಕುಞÂ, ಶಂಕರ ನಾಯ್ಕ್, ಕೆ. ಗಿರೀಶ್, ತಾರಾನಾಥ ಮಧೂರು, ಎಂ.ಎ ಅಬ್ದುಲ್ಲ, ರಾಧಾಕೃಷ್ಣನ್, ಬಾಲಕೃಷ್ಣನ್ ಉಪಸ್ಥಿತರಿದ್ದರು.





