ಮಂಜೇಶ್ವರ: ಯುವ ಕವಯತ್ರಿ ಲಕ್ಷ್ಮೀ.ಕೆ ಅವರ ಮರುಭೂಮಿಯ ಮಳೆಹನಿಗಳು ಕವನ ಸಂಕಲನವನ್ನು ಮಂಜೇಶ್ವರ ಹೊಸಬೆಟ್ಟು ಗಿಳಿವಿಂಡು ಆವರಣದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಡಾ.ಯು.ಮಹೇಶ್ವರಿ ಇಂದು(ಭಾನುವಾರ)ಬಿಡುಗಡೆಗೊಳಿಸುವರು.
ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಸುನಿಲ್.ಜೋನ್.ಜೆ ಉದ್ಘಾಟಿಸುವರು. ಕಾಸರಗೋಡು ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಏತಡ್ಕ ಕೃತಿಯನ್ನು ಪರಿಚಯಿಸಲಿದ್ದು ಗೋವಿಂದ ಪೈ ಕಾಲೇಜು ಉಪ ಪ್ರಾಂಶುಪಾಲ ಅಮಿತಾ.ಎಸ್, ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬಾಲಕೃಷ್ಣ ಮಾಸ್ತರ್ ನಾಟ್ಯನಿಲಯಂ ಮಂಜೇಶ್ವರ, ಮಹೇಶ್ ರಾಜ್, ಲಕ್ಷ್ಮಿ.ಕೆ ಉಪಸ್ಥಿತರಿರುವರು. ಗೋವಿಂದ ಪೈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಪಿ.ಎಂ.ಸಲೀಂ, ಡಾ.ಸಚೀಂದ್ರನ್.ವಿ, ಮೊಹಮ್ಮದ್ ಅಲಿ, ಎಂ.ಶ್ಯಾಮಲಾ, ಡಾ.ಸಂಧ್ಯಾಕುಮಾರಿ.ಕೆ, ಯುವ ಸಂಘಟಕ ಶ್ರೀಕಾಂತ್ ನೆಟ್ಟಣಿಗೆ, ಸತೀಶ್ ನಾಯ್ಕಾಪು, ಉದಯ, ರಕ್ಷಿತಾ ಶುಭಾಶಂಸನೆಗೈಯ್ಯುವರು.
ಕಾರ್ಯಕ್ರಮದಲ್ಲಿ ಶ್ರದ್ಧಾ ಭಟ್ ಕವನಗಳನ್ನು ಹಾಡಲಿದ್ದಾರೆ. ಗೋವಿಂದ ಪೈ ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ.ಪಿ, ಪ್ರಶಾಂತ್ ಹೊಳ್ಳ.ಎನ್ ಮೊದಲಾದವರು ಉಪಸ್ಥಿತರಿರುವರು.




