ಕಾಸರಗೋಡು: ವಿದ್ಯಾನಗರ ಚಿನ್ಮಯಕಾಲನಿ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಶಾಲೆಯ 23ನೇ ವಾರ್ಷಿಕ ಸಮಾರಂಭ ಇಂದು ಕಾಸರಗೋಡು ಲಲಿತಕಲಾ ಸದನದಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ನಗರಸಭಾ ಸದಸ್ಯೆ ಸವಿತಾ ಐ.ಭಟ್ ಸಮಾರಂಭ ಉದ್ಘಾಟಿಸುವರು. 10ಕ್ಕೆ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯುವುದು. ವಯಲಿನ್‍ನಲ್ಲಿ ಪ್ರಭಾಕರ ಕುಂಜಾರು, ಡಾ. ಮಾಯಾ ಮಲ್ಯ ಕಾಸರಗೋಡು, ಮೃದಂಗದಲ್ಲಿ ಕೊವ್ವಲ್ ಕಣ್ಣನ್ ಕಾಞಂಗಾಡು, ರಾಜೀವ್‍ಗೋಪಾಲ್ ವೆಳ್ಳಿಕೋತ್, ಟಿ.ಕೆ ವಾಸುದೇವ ಕಾಞಂಗಾಡ್ ಸಹಕರಿಸುವರು.
ಸಂಜೆ 4ಕ್ಕೆ ನಡೆಯುವ ಸಂಗೀತಕಾರ್ಯಕ್ರಮದಲ್ಲಿ ಅಭಿಲಾಶ್ ಗಿರಿಪ್ರಸಾದ್ ಚೆನ್ನೈ ಅವರ ಹಾಡುಗಾರಿಕೆ ನಡೆಯುವುದು. ವಯಲಿನ್‍ನಲ್ಲಿ ಕರೈಕಲ್ ವೆಂಕಟಸುಬ್ರಹ್ಮಣ್ಯ ಚೆನ್ನೈ, ಮೃದಂಗದಲ್ಲಿ ಬಾಲಕೃಷ್ಣ ಕಾಮತ್ ಕೊಚ್ಚಿ, ಘಟಂನಲ್ಲಿ ಉಣ್ಣಿಕೃಷ್ಣನ್ ಮಂಜೂರ್, ಮೋರ್ಸಿಂಗ್‍ನಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರ್ ಸಹಕರಿಸುವರು. ಅಭಿಲಾಶ್ ಗಿರಿಪ್ರಸಾದ್ ಚೆನ್ನೈ ಅವರು ಪ್ರಸಿದ್ಧ ಸಂಗೀತ ವಿದ್ವಾಂಸ, ವಿದ್ವಾನ್ ಎ.ಮುರಳಿ ಅವರ ಶಿಷ್ಯರಾಗಿದ್ದು, ದೇಶ, ವಿದೇಶಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.



