ಉಪ್ಪಳ: ತುಳು ಸಾಂಸ್ಕøತಿಕ, ಸಾಹಿತ್ತಿಕ ಮೌಲ್ಯ ಎತ್ತಿಹಿಡಿಯುವಲ್ಲಿ ಮಂದಾರ ರಾಮಾಯಣದ ಕೊಡುಗೆ ಎಂದಿಗೂ ಮಹತ್ವದ ದಾಖಲೆ. ಆದರೆ ಅದರೊಳಗಿನ ಮೌಲ್ಯ, ತೌಳವ ಸಮೃದ್ದ ಭಾಷಾ ಸೊಗಡನ್ನು ಪಸರಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಮಾಣದ ಪ್ರಚಾರ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ತುಳು ವಲ್ರ್ಡ್ ಮಂಗಳೂರಿನ ಸರಣಿ ಅಭಿಯಾನ ಸ್ತುತ್ಯರ್ಹ ಎಂದು ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಮೀನುಗಾರಿಕ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ತುಳು ವರ್ಲ್ಡ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಕಾಯರ್ಕಟ್ಟೆ ಕುಲಾಲ ಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಜಾನಪದಮೇಳದಲ್ಲಿ ವಿಶೇಷವಾಗಿ ಆಯೋಜಿಸಲಾದ ಬೀರದ ಬೊಲ್ಪು ತುಳು ಕಾವ್ಯಯಾನ ಅಭಿಯಾನಕ್ಕೆ ತುಳು ಮಂದಾರ ರಾಮಾಯಣ ಕೃತಿಯನ್ನು ಪ್ರವಚನಕಾರರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ವಿಭಿನ್ನ ಆಯಾಮಗಳ, ತುಳುನಾಡ ಸಂಸ್ಕøತಿಯೊಮದಿಗೆ ಸಮ್ಮಿಲನಗೊಂಡಿರುವ, ತುಳುನಾಡ ಜನತೆಗೆ ನಿಕಟವಾದ ರೀತಿಯಲ್ಲಿ ಕೃತಿ ರಚನೆಗೊಂಡಿರುವುದು ಭಾಷಾ ಬೆಳವಣಿಗೆಗೆ ಪೂರಕವಾಗಿದೆ. ಸಂಸ್ಕøತಿ, ಭಾಷಾಭಿಮಾನವನ್ನು ಯುವ ತಲೆಮಾರಿಗೆ ದಾಟಿಸುವ ಉತ್ತಮ ಯತ್ನವಾಗಿ ಈ ಅಭಿಯಾನ ಯಶಸ್ವಿಯಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯಕಟ್ಟೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ತುಳುವಲ್ರ್ಡ್ ಮಂಗಳೂರಿನ ಸಂಚಾಲ ಡಾ.ರಾಜೇಶ ಆಳ್ವ ಬದಿಯಡ್ಕ ಉಪಸ್ಥಿತರಿದ್ದು ಮಾತನಾಡಿ, ಉದ್ದೇಶಿತ ಅಭಿಯಾನವು ಸಮಗ್ರ ತುಳುನಾಡಿನಾದ್ಯಂತ ನವೋತ್ಸಾಹವನ್ನು ಉದ್ದೀಪಿಸುವಲ್ಲಿ ಕಾರಣವಾಗಲಿದೆ. ಕುಂದಾಪುರದ ತುಳುವೇಶ್ವರದಿಂದ, ಕಾಸರಗೋಡಿನ ನೀಲೇಶ್ವರದ ವರೆಗಿನ ಪ್ರಾಚೀನ ತುಳುನಾಡಿನ ಮೂಲ ಪರಂಪರೆಯನ್ನು ನೆನಪಿಸುವ, ಜನರನ್ನು ಒಗ್ಗೂಡಿಸುವ, ಸಾಂಸ್ಕøತಿಕ ನೆಲೆಗಟ್ಟನ್ನು ಭದ್ರಪಡಿಸುವ ನಿಟ್ಟಿನಲ್ಲಿ ಅಭಿಯಾನವು ಮುಂದುವರಿಯಲಿದೆ ಎಂದು ತಿಳಿಸಿದರು.
ತುಳುವ ವಾಲ್ಮೀಕಿ ವಾಚನ-ಪ್ರವಚನ ಸರಣಿ ಅಭಿಯಾನದ ಕಾವ್ಯ ವಾಚಕರಾದ ಶಿವಪ್ರಸಾದ್ ಎಡಪದವು ಹಾಗೂ ಶಾಲಿನಿ ಹೆಬ್ಬಾರ್, ಪ್ರವಚನಕಾರರಾದ ಡಾ.ದಿನಕರ ಪಚ್ಚನಾಡಿ ಈ ಸಂದರ್ಭ ಉಪಸ್ಥಿತರಿದ್ದು ಸಚಿವರಿಂದ ಮಂದಾರ ರಾಮಾಯಣದ ಕೃತಿ ಸ್ವೀಕರಿಸಿದರು. ಉದ್ಯಮಿ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಸಾಪ ದ.ಕ.ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆಎಂ.ಅಶ್ರಫ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಪೈವಳಿಕೆ ಗ್ರಾ.ಪಂ. ಸದಸ್ಯೆ ರಝಿಯಾ ರಝಾಕ್ ಚಿಪ್ಪಾರು, ಸದಸ್ಯ ಹರೀಶ್ ಬೊಟ್ಟಾರಿ, ಪೈವಳಿಕೆ ಅಣ್ಣತಮ್ಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‍ನ ಅಝೀಜ್ ಕಳಾಯಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ,ಕಾರ್ಯದರ್ಶಿ ಅಖಿಲೇಶ್ ನಗುಮುಗಂ,ವಿದ್ಯಾ ಗಣೇಶ್ ಅಣಂಗೂರು, ಪ್ರೊ.ಎ.ಶ್ರೀನಾಥ್ ಕಾಸರಗೋಡು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿದ್ಯಾನಂದ ಕಾರಂತ ಪೆÇಳಲಿ, ಹಮೀದ್ ಕುಂಞõÁಲಿ, ಸೈಫುಲ್ಲ ತಂಙಳ್, ಜಾನಪದ ಪರಿಷತ್ತಿನ ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂಧ್ಯಾಗೀತ ಬಾಯಾರು, ಶ್ರೀಕಾಂತ್ ನೆಟ್ಟಣಿಗೆ, ಝಡ್ ಎ.ಕಯ್ಯಾರ್, ಪೃಥ್ವಿ ಶೆಟ್ಟಿ ಕುಂಬಳೆ, ಜಯಾನಂದಕುಮಾರ್ ಹೊಸದುರ್ಗ, ಜಯರಾಮ ಪಾಟಾಳಿ ಪಡುಮಲೆ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾವ್ಯ ಯಾನದ ಮೊದಲ ಕಾರ್ಯಕ್ರಮ ಪ್ರಸ್ತುತಿ ನಡೆಯಿತು.






