ಕಾಸರಗೋಡು: ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಜನವರಿ 12ರಂದು ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಮಾವುಂಗಾಲ್ ಪುದಿಯಕಂಡ ಪರಶಿವ ವಿಶ್ವಕರ್ಮ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ ಯೋಜನೆಯನ್ವಯ ನಿರ್ಮಿಸಲುದ್ದೇಶಿಸಿರುವ ಕಟ್ಟಡದ ಶಿಲಾನ್ಯಾಸ ನಡೆಸುವರು.
ಸಾಯಂಕಾಲ 4ಕ್ಕೆ ನೀಲೇಶ್ವರದಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ದೇಶದ್ರೋಹಿಗಳು ನಡೆಸುತ್ತಿರುವ ಸುಳ್ಳು ಹಾಗೂ ಹಿಂಸಾಪ್ರೇರಕ ಪ್ರಚಾರದ ವಿರುದ್ಧ ಬಿಜೆಪಿ ಆಯೋಜಿಸಿರುವ ಜನಜಾಗ್ರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವರು.




