ಕಾಸರಗೋಡು: ಉದುಮ ಪಡಿಂಙõÁರ್ ತೆರು ದೇವತ್ ತೆರುವತ್ತಂಬಲಂ ಶ್ರೀ ಚುಳಿಯಾರ್ ಶ್ರೀಭಗವತೀ ಕ್ಷೇತ್ರದಲ್ಲಿ ಜ.27 ರಿಂದ 30 ರು ವರೆಗೆ ನಡೆಯುವ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕಾಗಿ ನಿರ್ಮಿಸುವ ಚಪ್ಪರಕ್ಕೆ ಅಗತ್ಯದ ತೆಂಗಿನ ಗರಿಯ ನೇಯ್ಗೆ ಕಾರ್ಯಕ್ರಮವನ್ನು ಉದುಮ ಗ್ರಾಮ ಪಂಚಾಯತ್ ಸದಸ್ಯ ಕೆ.ವಿ.ಅಪ್ಪು ಉದ್ಘಾಟಿಸಿದರು.
ಸಂಪೂರ್ಣವಾಗಿ ಹಸಿರು ಪಾಲಿಸುವ ಎಂಬ ಉದ್ದೇಶದಿಂದ ತೆಂಗಿನ ಒಲೆಯನ್ನು ಚಪ್ಪರಕ್ಕೆ ಬಳಸಲಾಗುತ್ತಿದೆ.
ಚಪ್ಪರ ಸಮಿತಿ ಅಧ್ಯಕ್ಷ ಸಿ.ಕೆ.ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿದರು. ಸಿ.ಗಜೇಂದ್ರ ಪಣಿಕ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ.ವೇಣು, ಸಂಚಾಲಕ ಕೆ.ವಿಜಯನ್, ನವೀಕರಣ ಸಮಿತಿ ಸಂಚಾಲಕ ಸಿ.ಬಾಲಕೃಷ್ಣನ್, ಎನ್.ರಾಜನ್, ಸಿ.ಮೋಹನನ್, ಸಿ.ಕರುಣಾಕರನ್, ಕೆ.ನಾರಾಯಣನ್, ಇ.ಕೃಷ್ಣನ್, ಕೆ.ರವೀಂದ್ರನ್, ಸಿ.ಗಂಗಾಧರನ್, ಕೆ.ನಂದನ್, ಎನ್.ನಾರಾಯಣನ್, ಸಿ.ವಿಜಯನ್, ಇ.ಪ್ರಮೋದ್, ರಜೀಶ್ ಪಿ.ಟಿ, ಸಿ.ಕೆ.ಉಣ್ಣಿಕೃಷ್ಣನ್, ಟಿ.ರಮಾ ಮೊದಲಾದವರು ಮಾತನಾಡಿದರು. ಸಂಚಾಲಕ ಕೆ.ವಿ.ಕುಟ್ಟಿಕೃಷ್ಣನ್ ಸ್ವಾಗತಿಸಿ, ವಂದಿಸಿದರು.



