ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 2020-21ನೇ ವಾರ್ಷಿಕ ಯೋಜನೆ ರೂಪೀಕರಣ ವರ್ಕಿಂಗ್ ಗ್ರೂಪ್ ಸೆಮಿನಾರ್ ಪಂಚಾಯಿತಿ ಕುಟುಂಬಶ್ರೀ ಹಾಲ್‍ನಲ್ಲಿ ಸೋಮವಾರ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ನಿರ್ಣಾಯಕ ಹಂತದಲ್ಲಿ ನಾವಿದ್ದೇವೆ. ಇಂದು ಇಲ್ಲಿ ಕೈಗೊಳ್ಳುವ ತೀರ್ಮಾನಗಳು ಜನತೆಗೆ ಉಪಕಾರಪ್ರದವಾಗುವ ರೀತಿಯಲ್ಲಿರಬೇಕು ಎಂದು ವಿವಿಧ ಮಾಹಿತಿಗಳನ್ನು ನೀಡಿದರು.
ಉಪಾಧ್ಯಕ್ಷೆ ಸೈಬುನ್ನೀಸಾ ಮೊಯ್ದೀನ್ ಕುಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನ್ವರ್, ಶ್ಯಾಮಪ್ರಸಾದ, ಶಬಾನ, ಗ್ರಾ.ಪಂ.ಸದಸ್ಯರುಗಳಾದ ಶಂಕರ ಡಿ., ಮುನೀರ್ ಮೊದಲಾದವರು ಮಾತನಾಡಿದರು. ವಿವಿಧ ವಾರ್ಡುಗಳ ಸದಸ್ಯರು, ವರ್ಕಿಂಗ್ ಗ್ರೂಪ್ ಸದಸ್ಯರು ಪಾಲ್ಗೊಂಡಿದ್ದರು.




