HEALTH TIPS

ಕನ್ನಡದಲ್ಲಿ ಸಿದ್ಧವಾದ ರಾಜ್ಯ ಸರ್ಕಾರದ ಆರ್ಥಿಕ ಸಹಾಯಗಳು ಪುಸ್ತಕ: ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರಕಟಗೊಳ್ಳುತ್ತಿರುವ ಯೋಜನೆಗಳ ಸಮಗ್ರ ಹೊತ್ತಗೆ ಬಿಡುಗಡೆ

 
            ಕುಂಬಳೆ:  ರಾಜ್ಯ ಸರ್ಕಾರವು ತನ್ನ ಸೇವೆಗಳನ್ನು ಎಲ್ಲ ಜನತೆಗೂ ತಲಪಿಸುವ ಉದ್ದೇಶದಿಂದ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಕಾರದೊಂದಿಗೆ "ರಾಜ್ಯ ಸರ್ಕಾರದ ಆರ್ಥಿಕ ಸಹಾಯಗಳು" ಎಂಬ ಸಮಗ್ರ ಮಾಹಿತಿಗಳ ಪುಸ್ತಕವನ್ನು ಕನ್ನಡದಲ್ಲೂ ಪ್ರಕಟಿಸಿದೆ. ಈ ಪುಸ್ತಕ ಮಂಗಳವಾರ ಬಿಡುಗಡೆಗೊಂಡಿತು.
         ಕುಂಬಳೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಡುಗಡೆಗೊಳಿಸಿದರು. ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರ್ಕಾರವೊಂದು ಭಾಷಾ ಅಲ್ಪಸಂಖ್ಯಾತರಿಗಾಗಿ ಆರ್ಥಿಕ ಸಹಾಯಗಳ ಪುಸ್ತಕವೊಂದನ್ನು ಮೊತ್ತಮೊದಲಿಗೆ ಕನ್ನಡದಲ್ಲಿ ಪ್ರಕಟಿಸುತ್ತಿದ್ದು, ಜಿಲ್ಲಾ ವಾರ್ತಾ ಇಲಾಖೆಯ ನೇತೃತ್ವದಲ್ಲಿ ಇದು ಸಿದ್ಧವಾಗಿದೆ.
           ಸರ್ಕಾರದ ಎಲ್ಲ ಯೋಜನೆಗಳು ಈ ಮೂಲಕ ಒಂದೇ ಪುಸ್ತಕದಲ್ಲಿ ಜನತೆಗೆ ಸಿಗಲಿದೆ ಎನ್ನುವುದು ಇಲ್ಲಿ ಗಮನಾರ್ಹ ವಿಚಾರ. ಸ್ಥಳೀಯಾಡಳಿತೆ ಸಂಸ್ಥೆಗಳ ಮೂಲಕ ವಿವಿಧ ಇಲಾಖೆಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಸಮಗ್ರ ಮಾಹಿತಿ, ಪ್ರತಿ ಯೋಜನೆಗಳ ಸಹಾಯ ಪಡೆಯುವ ಬಗೆ, ಅರ್ಜಿಯ ಸ್ವರೂಪ, ಕಳುಹಿಸಬೇಕಾದ ವಿಳಾಸ ಇತ್ಯಾದಿಗಳ ಮಾಹಿತಿ ಈ ಪುಸ್ತಕದಲ್ಲಿದೆ. ಗಂಭೀರ ಸ್ವರಪದ ರೋಗಿಗಳು, ವಯೋವೃದ್ಧರು, ಪರಿಶಿಷ್ಟ ಜಾತಿ-ಪಂಗಡದ ಮಂದಿ, ಇತರ ಹಿಂದುಳಿದ ಜನಾಂಗದವರು, ಮಕ್ಕಳು, ಬೇರೆ ರಾಜ್ಯಗಳ ಕಾರ್ಮಿಕರು, ಆನಿವಾಸಿಗಳು, ನಿವೃತ್ತ ಸೈನಿಕರು ಸಹಿತ ಎಲ್ಲ ಜನತೆಗೆ ಬೇಕಾದ ಸೌಲಭ್ಯಗಳ ವಿವರಗಳು ಈ ಹೊತ್ತಗೆಯಲ್ಲಿದೆ. ವಿಶೇಷ ಪರಿಶೀಲನೆ ಅಗತ್ಯವಿರುವ ಜನತೆಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳಿಗೆ ಆದ್ಯತೆ ನೀಡಿ ರಾಜ್ಯ ಸರ್ಕಾರ ರಚಿಸಿರುವ ಯೋಜನೆಗಳ ಸಮಗ್ರ ಮಾಹಿತಿಗಳು ಇಲ್ಲಿದ್ದು, ಸಾರ್ವಜನಿಕರ ಕೈಗೆಟಕಲಿವೆ.
           ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂದೇಶ, ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಯು.ವಿ.ಜೋಸ್  ಅವರ ಪ್ರಸ್ತಾವನೆ ಇರುವ ಈ ಪುಸ್ತಕ ಗಡಿನಾಡಿನ ಜನತೆಗೆ ತುಂಬ ಸಹಕಾರಿಯಾಗಿದೆ. ಯೋಜನೆಗಳ ಹೆಸರು ಆಯಾ ಇಲಾಖೆಗಳ ವ್ಯಾಪ್ತಿಯಲ್ಲಿರುವವು. ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯಾಡಳಿತೆ ಸಂಸ್ಥೆಗಳು, ವಾರ್ಡ್ ಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರ ಮೂಲಕ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಆರ್ಥಿಕ ಸಹಾಯ ಯೋಜನೆಗಳು ಎಂಬ ಪುಸ್ತಕ ವಾಚನಕ್ಕೆ ಅವಕಾಶಗಳಿವೆ.
         ಕುಂಬಳೆಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪುಸ್ತಕವನ್ನು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎನೆಲಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಾಜಿ ಸಂಸದ ಪಿ.ಕರುಣಾಕರನ್,ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಹಕಾರಿ ಇಲಾಖೆ ಜೊತೆ ರೆಜಿಸ್ತಾರ್ ವಿ.ಮಹಮ್ಮದ್ ನೌಷಾದ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries