ಕುಂಬಳೆ: ಲೈಬ್ರರಿ ಕೌನ್ಸಿಲ್ ವಜ್ರ ಮಹೋತ್ಸವ ಈಗಾಗಲೇ ಪೂರ್ತಿಗೊಂಡಿದ್ದು ಇದರ ಭಾಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸಮಾರಂಭ ಇಂದು(ಜನವರಿ 5) ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರ ಕವಿ ಗೋವಿಂದ ಪೈ ವೇದಿಕೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಮೆರವಣಿಗೆ ನಡೆಯಲಿದೆ. 10 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೌನ್ಸಿಲ್ ರಾಜ್ಯ ಸಮಿತಿ ಸದಸ್ಯ ಯು.ಶಾಮ ಭಟ್ ಅಧ್ಯಕ್ಷತೆ ವಹಿಸುವರು. ರಾಜ್ಯ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ನ್ಯಾಯವಾದಿ.ಪಿ.ಅಪ್ಪುಕ್ಕುಟ್ಟನ್ ಉದ್ಘಾಟಿಸುವರು. ವಾಸು ಪೇರೋಡ್ , ಆಯಿಶಾ ಎ.ಎ.ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಸಾಧಕರಿಗೆ ಸನ್ಮಾನ ನಡೆಯಲಿದೆ. 12 ರಿಂದ ದಿ.ಮೊಹಮ್ಮದ್ ಮಾಸ್ತರ್ ಸಂಸ್ಮರಣೆ ನಡೆಯಲಿದೆ. ಜಿಲ್ಲಾಧ್ಯಕ್ಷ ವಿ.ವಿ.ಕೆ ಪನೆಯಾಲ ಸಂಸ್ಮರಣಾ ಭಾಷಣ ಮಾಡುವರು. 12.30 ಕ್ಕೆ ವಿಚಾರ ಸಂಕಿರಣ ನಡೆಯಲಿದೆ. ನವ ಕೇರಳ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರ ಎಂಬ ವಿಷಯದಲ್ಲಿ ಡಾ.ವಿ.ಪಿ.ಪಿ ಮುಸ್ತಫಾ ವಿಷಯ ಮಂಡಿಸುವರು. ಗಾಂಧೀ ಸ್ಮøತಿ ಹಾಗೂ ಗ್ರಂಥಾಲಯ ಚಳುವಳಿ ಎಂಬ ವಿಷಯದಲ್ಲಿ ಅಂಬುಜಾಕ್ಷನ್ ಮಾಸ್ತರ್ ವಿಷಯ ಮಂಡಿಸರುವರು.ಅಪರಾಹ್ನ 3 ರಿಂದ ರಾಘವನ್ ಬೆಳ್ಳಿಪ್ಪಾಡಿ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಲಿದೆ. 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಎಂ.ಶಂಕರ್ ರೈ ಮಾಸ್ತರ್ ಉದ್ಘಾಟಿಸುವರು. ಅಶ್ರಫ್ ಕೊಡ್ಯಮೆ, ಗಿರಿಜಾ ತಾರನಾಥ್, ವಿಜಯ ಕುಮಾರ್ ಪಾವಳ, ಜಯಚಂದ್ರಿಕ.ಎಲ್.ಬಿ, ಅಕ್ಷಯ್ ಕುಮಾರ್ ಶುಭಾಶಂಸನೆಗೈಯ್ಯುವರು.






