ಕುಂಬಳೆ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟದ ಕುಂಬಳೆ ಘಟಕದ ಕುಟುಂಬಮೇ¼ಳಿಂದು(ಶನಿವಾರ) ನಾರಾಯಣಮಂಗಲದ ಶ್ರೀಗಣೇಶ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಕುಂಬಳೆ ಘಟಕದ ಅಧ್ಯಕ್ಷ ಎ.ಈಶ್ವರ ಭಟ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯದರ್ಶಿ ಕುಞÂ್ಞಂಬು ನಾಯರ್ ಉದ್ಘಾಟಿಸುವರು. ಕಾಸರಗೋಡು ಬ್ಲಾಕ್ ಸಮಿತಿ ಅಧ್ಯಕ್ಷ ಡಿ.ರಾಮಕೃಷ್ಣ ಭಟ್, ಮಂಜೇಶ್ವರ ಬ್ಲಾಕ್ ಸಮಿತಿ ಅಧ್ಯಕ್ಷ ಯು.ರವಿಚಂದ್ರ, ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ಮೋಹನ್, ಉಸ್ತುವಾರಿ ಸದಸ್ಯ ಡಿ.ಕೃಷ್ಣ ಭಟ್ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




