ಉಪ್ಪಳ: ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಇಂದು ಜಗದಗಲ ಮನ್ನಣೆ ಹೊಂದಿ ವ್ಯಾಪಕ ಜನಾಕರ್ಷಣೆಗೊಳಗಾಗುತ್ತಿದೆ. ಆದರೆ ಆಧುನಿಕತೆಯ ವೇಗದಲ್ಲಿ ಪರಂಪರೆಯನ್ನು ಉಳಿಸಿ ಮುನ್ನಡೆಸುವ ನಿಟ್ಟಿನಲ್ಲಿ ಹಿರಿಯ ಅನುಭವಿ ಕಲಾವಿದರು ಜೊತೆಗೂಡಿ ಹುಟ್ಟುಹಾಕಿರುವ ಗಡಿನಾಡ ಯಕ್ಷಗಾನ ಅಕಾಡೆಮಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ತುಳು ವರ್ಲ್ಡ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಕಾಯರ್ಕಟ್ಟೆ ಕುಲಾಲ ಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಜಾನಪದಮೇಳ ಹಾಗೂ ಬೀರದ ಬೊಲ್ಪು ತುಳು ಕಾವ್ಯಯಾನ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಹೊಂದಿರುವ ಗಡಿನಾಡ ಯಕ್ಷಗಾನ ಅಕಾಡೆಮಿಯನ್ನು ಲಾಂಛನ ಬಿಡುಗಡೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿ ಪ್ರತಿನಿಧಿಗಳಾದ ಜಯರಾಮ ಪಾಟಾಳಿ ಪಡುಮಲೆ, ದೇಲಂಪಾಡಿ ಬಾಲಕೃಷ್ಣ ಗೌಡ, ಮುಕುಂದರಾಜ್ ಮಲ್ಲ, ಮಹಾಬಲೇಶ್ವರ ಭಟ್ ಭಾಗಮಂಡಲ, ಸುರೇಂದ್ರ ನಾಟೆಕಲ್ಲು, ಸುಂದರ ಪೆರ್ಲ ಅವರಿಗೆ ಸಚಿವರು ಲಾಂಛನ ನೀಡಿ ಅತ್ಯುತ್ತಮವಾಗಿ ನೂತನ ಅಕಾಡೆಮಿಯನ್ನು ಮುನ್ನಡೆಸುವಂತೆ ಸಚಿವರು ಹಾರೈಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯಕಟ್ಟೆ, ತುಳುವಲ್ರ್ಡ್ ಮಂಗಳೂರಿನ ಸಂಚಾಲ ಡಾ.ರಾಜೇಶ ಆಳ್ವ ಬದಿಯಡ್ಕ,ಉದ್ಯಮಿ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಸಾಪ ದ.ಕ.ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆಎಂ.ಅಶ್ರಫ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಪೈವಳಿಕೆ ಗ್ರಾ.ಪಂ. ಸದಸ್ಯೆ ರಝಿಯಾ ರಝಾಕ್ ಚಿಪ್ಪಾರು, ಸದಸ್ಯ ಹರೀಶ್ ಬೊಟ್ಟಾರಿ, ಪೈವಳಿಕೆ ಅಣ್ಣತಮ್ಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‍ನ ಅಝೀಜ್ ಕಳಾಯಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ,ಕಾರ್ಯದರ್ಶಿ ಅಖಿಲೇಶ್ ನಗುಮುಗಂ,ವಿದ್ಯಾ ಗಣೇಶ್ ಅಣಂಗೂರು, ಪ್ರೊ.ಎ.ಶ್ರೀನಾಥ್ ಕಾಸರಗೋಡು, ವಿದ್ಯಾನಂದ ಕಾರಂತ ಪೆÇಳಲಿ, ಹಮೀದ್ ಕುಂಞõÁಲಿ, ಸೈಫುಲ್ಲ ತಂಙಳ್, ಜಾನಪದ ಪರಿಷತ್ತಿನ ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂಧ್ಯಾಗೀತ ಬಾಯಾರು, ಶ್ರೀಕಾಂತ್ ನೆಟ್ಟಣಿಗೆ, ಝಡ್ ಎ.ಕಯ್ಯಾರ್, ಪೃಥ್ವಿ ಶೆಟ್ಟಿ ಕುಂಬಳೆ, ಜಯಾನಂದಕುಮಾರ್ ಹೊಸದುರ್ಗ ಉಪಸ್ಥಿತರಿದ್ದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಮುಖ್ಯಾಂಶ:
ಗಡಿನಾಡ ಯಕ್ಷಗಾನ ಅಕಾಡೆಮಿಯ ಲಾಂಛನವು ಕಾಸರಗೋಡು ಜಿಲ್ಲೆಯ ಭೂಪಟದೊಂದಿಗೆ ಯಕ್ಷಗಾನದ ವೇಷದ ಚಿತ್ರವಿರುವ ಆಕರ್ಷಣೀಯ ಬಣ್ಣಗಳೊಂದಿಗೆ ಗಮನ ಸೆಳೆದಿದೆ. ಯುವ ಆಸಕ್ತರಿಗೆ ಪರಂಪರೆಯ ಹಿಮ್ಮೇಳ, ಮುಮ್ಮೇಳ, ರಂಗಪ್ರಸ್ತುತಿ, ಪ್ರಸಂಗ ಅಧ್ಯಯನಗಳ ವಿಶಾಲ ಚಿಂತನೆಗಳೊಂದಿಗೆ ಅಕಾಡೆಮಿ ರೂಪುಗೊಂಡಿದೆ.





