ಕಾಸರಗೋಡು: ರಾಜ್ಯದಲ್ಲಿ ಮಾರಾಟ ಮಾಡುವ ಒಂದು ಲೀಟರ್ ಬಾಟಲಿ ನೀರಿನ ಗರಿಷ್ಠ ದರವನ್ನು 13 ರೂ. ಆಗಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಜಾರಿಗೊಳಿಸಿದೆ.
ಮಾರ್ಚ್ 17 ರಿಂದಲೇ ಇದನ್ನು ಜಾರಿಗೊಳಿಸಲಾಗಿದ್ದು 13 ರೂ. ಗಿಂತ ಹೆಚ್ಚು ಬೆಲೆಗೆ ನೀರು ಮಾರಾಟ ಮಾಡಲು ಸಾಧ್ಯವಿಲ್ಲ. ಸರಕಾರ ನೀಡಿದ ನಿರ್ದೇಶ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸುವ ಹೊಣೆಗಾರಿಕೆಯನ್ನು ಸರಕಾರ ಲೀಗಲ್ ಮೆಟ್ರೋಲಜಿ ಇಲಾಖೆಯ ಇನ್‍ಸ್ಪೆಕ್ಟರ್‍ಗಳಿಗೆ ವಹಿಸಿಕೊಟ್ಟಿದೆ. ಮಾತ್ರವಲ್ಲ ತಾಲೂಕು ಸಪ್ಲೈ ಅಧಿಕಾರಿಗಳಿಗೂ ಹೊಣೆಗಾರಿಕೆ ವಹಿಸಿಕೊಡಲಾಗಿದೆ.


