HEALTH TIPS

ಬಾರ್, ಮದ್ಯದಂಗಡಿ ಮುಚ್ಚುಗಡೆ ಇಲ್ಲ

   
      ಕಾಸರಗೋಡು: ಕೊರೊನಾ ವೈರಾಣು ಭೀತಿಯ ಹೆಸರಲ್ಲಿ ರಾಜ್ಯದಲ್ಲಿ ಮದ್ಯ ಬಾರ್‍ಗಳು ಮತ್ತು ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸಲಾಗುವುದಿಲ್ಲವೆಂದು ಅಬಕಾರಿ ಇಲಾಖೆ ಮತ್ತೆ ಸ್ಪಷ್ಟಪಡಿಸಿದೆ.
       ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸಿದ್ದಲ್ಲಿ ಅದು ರಾಜ್ಯದಲ್ಲಿ ಮದ್ಯದುರಂತ ಮತ್ತು ಇತರ ಮಾದಕ ವಸ್ತುಗಳ ಸಾಗಾಟ, ವ್ಯಸನಗಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ದಾರಿ ಮಾಡಿಕೊಡಲಿದೆ. ಮದ್ಯ ಬಾರ್‍ಗಳಲ್ಲಿ ಆಸನಗಳ ಮಧ್ಯೆ ಒಂದೂವರೆ ಮೀಟರ್‍ಗಳ ಅಂತರ ಇರಿಸಬೇಕೆಂಬ ನಿರ್ದೇಶವನ್ನು ನೀಡಲಾಗಿದೆ. ಈ ನಿರ್ದೇಶವನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಬಕಾರಿ ಇಲಾಖೆ ಅ„ಕಾರಿಗಳು ಖಾತರಿಪಡಿಸಬೇಕು. ನಿರ್ದೇಶ ಪಾಲಿಸದ ಬಾರ್‍ಗಳನ್ನು ಮುಚ್ಚಲಾಗುವುದೆಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ಸಾಂಕ್ರಾಮಿಕ ರೋಗ ಭೀತಿಯ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮತ್ತು ಬಾರ್‍ಗಳನ್ನು ಮುಚ್ಚುವಂತೆ ವಿಪಕ್ಷಗಳು ಮತ್ತು ಐ.ಎಂ.ಎ. ಆಗ್ರಸಿಸಿದೆ. ಅದಕ್ಕೆ ಬೇಕಾದ ಸರ್ಕಾರ ಈ ಸ್ಪಷ್ಟೀಕರಣ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries