ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕಠಿಣ ನಿಯಂತ್ರಣಗಳ ಜಾರಿಗೆ ಜಿಲ್ಲೆಯಲ್ಲಿ 1500 ಪೆÇಲೀಸರನ್ನು ನಿಯೋಗಿಸಲಾಗುವುದು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ತಿಳಿಸಿದ್ದಾರೆ.
ಉತ್ತರ ವಲಯ ಐಜಿ ಅಶೋಕ್ ಯಾದವ್, ಎರ್ನಾಕುಲಂ ಸಿಟಿ ಪೆÇಲೀಸ್ ಕಮೀಷನರ್ ವಿಜಯ್ ಸಖಾರೆ, ಡಿಐಜಿ ಸೇತುರಾಮನ್, ಕೋಟ್ಟಾಯಂ ಕ್ರೈಂಬ್ರಾಂಚ್ ಎಸ್.ಪಿ. ಸಾಬು ಮ್ಯಾಥ್ಯೂ, ಟೆಲಿ ಕಮ್ಯೂ ನಿಕೇಷನ್ ಎಸ್.ಪಿ. ಶಿಲ್ಪಾ ಡಿ ನೇತೃತ್ವ ವಹಿಸುವರು. ನಿಷೇದಾಜ್ಞೆ ಜಾರಿಯಲ್ಲಿರುವ ವೇಳೆ ಅನಾವಶ್ಯಕ ಅಲೆದಾಡುವವರನ್ನು ಬಂಧಿಸುವ ನಿಟ್ಟಿನಲ್ಲಿ 10ವಾಹನಗಳಲ್ಲಿ 50 ಪೆÇಲೀಸರನ್ನು ನಿಯೋಗಿಸಲಾಗಿಸಲಾಗುವುದು. ಮನೆಯಿಂದ ಹೊರಬಂದವರ ಅನಿವಾರ್ಯತೆಯನ್ನು ವಿಚಾರಿಸಿ,ಸರಿಯಾದುದೆಂದು ಕಂಡುಬಂದಲ್ಲಿ ತೆರಳಲು ಅನುಮತಿ ನೀಡಲಾಗುವುದು. ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳಿಗೆ ತೆರಳುವವರು ಗುಂಪಾಗಿ ನಿಲ್ಲುವಂತಿಲ್ಲ ಎಂದೂ ಸೂಚಿಸಲಾಗಿದೆ.


