ಕಾಸರಗೋಡು: ಕೇರಳದಲ್ಲಿ ಎಸ್ಸೆಸೆಲ್ಸಿ, ಪ್ಲಸ್‍ಟು ಪರೀಕ್ಷೆ ಮಂಗಳವಾರ ಆರಂಭಗೊಂಡಿತು. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10769 ಹಾಗೂ ಹೊಸದುರ್ಗ ಶೈಕ್ಷಣಿಕ ಜಿಲ್ಲೆಯಲ್ಲಿ 8870 ಒಳಗೊಂಡಂತೆ 19630ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ವಿದ್ಯಾರ್ಥಿಗಳು ಕಾಸರಗೋಡು ನಾಯಮರ್‍ಮೂಲೆ ಟಿಐಎಸ್‍ಎಸ್ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಇಲ್ಲಿ 732ಮಂದಿ ಎಸ್ಸೆಸೆಲ್ಸಿ, ಪ್ಲಸ್‍ಟು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯ 78ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲೆಯ 30ಕೇಂದ್ರಗಳಲ್ಲಿ ಭದ್ರತಾಕೋಶಗಳಲ್ಲಿ ಇರಿಸಲಾಗಿದ್ದು, ಪೊಲೀಸ್ ಬೆಂಗಾವಲಿನೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತಿದೆ. ಪರೀಕ್ಷಾ ಮೇಲ್ನೋಟಕ್ಕಾಗಿ 50 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.


