ಕಾಸರಗೋಡು: ಕೊರೊನಾ(ಕೋವಿಡ್-19)ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಜನತೆಗೆ ಸಲಹೆ ಮಾಡಿದ್ದಾರೆ. ವಿದೇಶೀಯರು ಮತ್ತುವಿದೇಶದಿಂದ ಊರಿಗೆ ಮರಳುತ್ತಿರುವವರು(ಅನಿವಾಸಿಗಳು)ಕಡ್ಡಾಯವಾಗಿ ಆರೋಗ್ಯ ಇಲಾಖೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು.
ಈ ಆದೇಶವನ್ನು ಉಲ್ಲಂಘಿಸುವವರವಿರುದ್ಧ ಕಾನನು ಕ್ರಮ ಕೈಗೊಳ್ಳಲಾಗುವುದು. ಹೋಟೆಲ್, ರೆಸ್ಟಾರೆಂಟ್‍ಗಳಲ್ಲಿ ವಸತಿಹೂಡಿರುವ ವಿದೇಶೀಯರ ಬಗ್ಗೆ ಆರೋಗ್ಯ ಇಲಾಖೆಯ ನಿಯಂತ್ರಣ ಕೊಠಡಿಗೆ ಮಾಹಿತಿನೀಡಬೇಕು. ರೋಗಲಕ್ಷಣ ಹೊಂದಿರುವವರು ಯಾವ ಕಾರಣಕ್ಕೂ ಇತರರೊಂದಿಗೆ ಸಂಪರ್ಕಿಸಬಾರದು.
ಶಾಲೆಗಳಿಗೆ ರಜಾ:
ಮಾ.31 ವರೆಗೆ ಒಂದನೇ ತರಗತಿಯಿಂದ 7ನೇ ತರಗತಿ ವರೆಗಿನ ತರಗತಿಗಳಿಗೆ ಪೂರ್ಣರೂಪದ ರಜೆ ಸಾರಲಾಗಿದೆ. ಈ ಆದೇಶ ಬಿ.ಬಿ.ಎಸ್. ಮತ್ತು ಸಿ.ಬಿ.ಸಿ.ಎ. ಶಾಲೆಗಳಿಗೂ ಅನ್ವಯವಾಗಿದೆ. ಪ್ರೊಫೆಷನಲ್ ಶಿಕ್ಷಣಾಲಯಗಳ ಸಹಿತ ಕಾಲೇಜುಗಳನ್ನು ಮುಚ್ಚುಗಡೆಗೊಳಿಸಲಾಗುವುದು. 8,9,10,ಪ್ಲಸ್-ವನ್, ಪ್ಲಸ್-ಟು ತರಗತಿಗಳ ಪರೀಕ್ಷೆ ಅತ್ಯಂತ ಸುರಕ್ಷತೆಯೊಂದಿಗೆ ಸೂಕ್ತ ಅವಧಿಯಲ್ಲೇ ನಡೆಯಲಿವೆ. ನಿಗಾದಲ್ಲಿಇರುವವರು ಪರೀಕ್ಷೆಗೆ ಹಾಜರಾಗುವುದಿದ್ದರೆ ಅವರಿಗೆ ಪ್ರತ್ಯೇಕ ಸಜ್ಜೀಕರಣ ನಡೆಸಲಾಗುವುದು. ಕೇಂದ್ರೀಯ, ನವೋದಯ ವಿದ್ಯಾಲಯಗಳು, ಅಂಗನವಾಡಿಗಳು, ಮದ್ರಸಾಗಳು ಇತ್ಯಾದಿಗಳು ಚಟುವಟಿಕೆನಡೆಸ ಕೂಡದು. ಅಂಗನವಾಡಿಗಳಲ್ಲಿ ಈ ಅವಧಿಯಲ್ಲಿ ನೀಡಲಾಗುವ ಭೋಜನವನ್ನು ಅವರವರ ಮನೆಗಳಿಗೇ ತಲಪಿಸಲಾಗುವುದು. ರಜಾಕಾಲದ ಕಲಿಕಾ ಕೇಂದ್ರಗಳು, ಟ್ಯುಟೋರಿಯಲ್ ಕಾಲೇಜುಗಳು ಇತ್ಯಾದಿಗಳು ಚಟುವಟಿಕೆ ನಡೆಸ ಕೂಡದು. ಶಾಲಾ ವಾರ್ಷಿಕೋತ್ಸವಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಸಮ್ಮೇಳನಗಳು ಇತ್ಯಾದಿ ನಡೆಸದಿರುವಂತೆಯೂ ಸೂಚಿಸಲಾಗಿದೆ. ಈ ತಿಂಗಳಲ್ಲಿ ಸಿನಿಮಾ ಮಂದಿರಗಳು ಮುಚ್ಚುಗಡೆಯಾಗಲಿದೆ. ಬೃಹತ್ ಮಾಲ್‍ಗಳಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭ ಹೊರತುಪಡಿಸಿ ಬೇರಾವುದೇ ಉತ್ಸವ ಚಟುವಟಿಕೆಗಳನ್ನು ನಡೆಸಕೂಡದು. ವಿವಾಹ ಸಮಾರಂಭಗಳನ್ನುನಡೆಸಬಹುದಾದರೂ, ಜನಸಂದಣಿ ಹೆಚ್ಚು ಇರದಂತೆ ನೋಡಿಕೊಳ್ಳಬೇಕು.
ಸಾರ್ವಜನಿಕ ಸಮಾರಂಭ ಬೇಡ:
ಅದಾಲತ್ ಸಹಿತ ಸಾರ್ವಜನಿಕ ಸಮಾರಂಭಗಳನ್ನು ಮಾ.31 ವರೆಗೆ ನಡೆಸದಿರುವಂತೆ ಸೂಚಿಸಲಾಗಿದೆ. ಕೊರೋನಾ ಬಾಧೆಯ ಹೆಸರಲ್ಲಿ ಜಿಲ್ಲೆಗೆಆಗಮಿಸುವ ವಿದೇಶೀಯರೊಂದಿಗೆ ಅಪಮರ್ಯಾದೆಯಿಂದ ವರ್ತಿಸಕೂಡದು ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿದೇಶಗಳಿಂದ ಆಗಮಿಸಿದವರಲ್ಲಿ ಕೆಮ್ಮು, ಸೀನುವಿಕೆ,ಜ್ವರ ಸಹಿತ ರೋಗಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಜಿಲ್ಲಾ ಕರೊನಾ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ಕೊರೊನಾ ಪರತಿರೋಧ ಚಟುವಟಿಕೆಗಳ ಅಂಗವಾಗಿ ಎಲ್ಲಾ ಇಲಾಖೆಗಳೂ ಜಾಗೃತರಾಗಿರಬೇಕು. ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ದಿಶಾ ಯೋಜನೆಯ ನಂಬ್ರ 0471-255205. ಟಾಲ್ ಫ್ರೀನಂಬ್ರ1056, ಕೊರೊನಾ ನಿಂತ್ರಣ ಕೊಠಡಿ(ಕಾಸರಗೋಡು) 00490000493 ಸಂಪರ್ಕಿಸುವಂತೆ ಸೂಚಿಸಲಾಗಿದೆ.

