ಬದಿಯಡ್ಕ: ಕುಂಬ್ಡಾಜೆ ಗ್ರಾಮಪಂಚಾಯತಿಯ ನಾಗರಿಕ ಹಕ್ಕು ದಾಖಲೆ-2020 ಬಿಡುಗಡೆಗೊಂಡಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ಸುಹರಾ ಬಿಡುಗಡೆಗೊಳಿಸಿದರು. ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಎಂ.ಚಂದ್ರಶೇಖರ ರೈ ಅವರಿಗೆ ದಾಖಲೆ ಹಸ್ತಾಂತರಿಸುವ ಮೂಲಕ ಅವರು ಬಿಡುಗಡೆಗೆ ಚಾಲನೆ ನೀಡಿದರು.
ಉಪಾಧ್ಯಕ್ಷ ಆನಂದ ಕೆ.ಮವ್ವಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ನ್ಯಾಯವಾದಿ ಮಹಮ್ಮದ್ ಕಾಸಿಂ, ಮಿಸ್ರಿಯಾ ಬಿ. ಯಶೋದಾ ಎನ್., ಸದಸ್ಯರಾದ ಎಸ್.ಮಹಮ್ದ್, ರವೀಂದ್ರ ರೈ ಗೋಸಾಡ, ಬಿ.ಟಿ.ಅಬ್ದುಲ್ಲ ಕುಂಞÂ, ಶಶಿಧರ ತೆಕ್ಕೆಮೂಲೆ, ನಳಿನಿ, ಶಾಂತಾ ಎಸ್.ಭಟ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಚ್ಯುತ ಮಣಿಯಾಣಿ ಸ್ವಾಗತಿಸಿದರು. ನಾಗರೀಕ ಹಕ್ಕು ದಾಖಲೆಯ ನಕಲು ಗ್ರಾಮ ಪಂಚಾಯತಿ ಕಚೇರಿಯಲ್ಲಿ, ಪಂಚಾಯತಿ ವೆಬ್ ಸೈಟ್ ನಲ್ಲಿ ಲಭ್ಯವಿದೆ.


