ಕಾಸರಗೋಡು: ಫೆ.20ರ ನಂತರ ವಿದೇಶಗಳಿಂದ, ಇತರ ರಾಜ್ಯಗಳಿಂದ ಊರಿಗೆ ಮರಳಿರುವ ವ್ಯಕ್ತಿಗಳು, ಅವರ ಕುಟುಂಬದ ಸದಸ್ಯರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಗಳಾಗಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಆರಾಧನಾಲಯಗಳಿಗೆ, ವಿವಾಹ ಸಹಿತ ಕಾರ್ಯಕ್ರಮಗಳಿಗೆ, ಸಭೆಗಳಿಗೆ ಇವರು ಬಾಗವಹಿಸಕೂಡದು ಎಂದವರು ತಿಳಿಸಿದು. ಕೋವಿಡ್ 19ರ ಹಿನ್ನೆಲೆಯಲ್ಲಿ ಆರಾಧನಾಲಯಗಳ ಸಹಿತ ಎಲ್ಲ ಸಾರ್ವಜನಿಕ/ಖಾಸಗಿ ಕೇಂದ್ರಗಳಲ್ಲಿ 50ಕ್ಕಿಂತ ಅಧಿಕ ಮಂದಿ ಸೇರುವುದನ್ನು 1939ರ ಮದ್ರಾಸು ಡಿಸೀಸ್ ಕಂಟ್ರೋಲ್ ಕಾಯಿದೆ 75 ಪ್ರಕಾರ ನಿಷೇಧಿಸಲಾಗಿದ್ದು ಆದೇಶಹೊರಡಿಸಲಾಗಿದೆ. ಆದರೆ ಇದು ಸೂಕ್ತ ರೀತಿ ಅನುಷ್ಠಾನಗೊಳ್ಳದೇ ಇದ್ದ ಪರಿಣಾಮ ಭಾರತೀಯ ದಂಡ ಸಂಃಇತೆ 269ನೇ ಕಾಯಿದೆ ಪ್ರಕಾರ ಈ ಆದೇಶ ಉಲ್ಲಂಘಿಸುವವರ ವಿರುದ್ಧ 6 ತಿಂಗಳಕಠಿಣ ಸಜೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಈ ಸಂಬಂಧ ಕ್ರಮಕೈಗೊಳ್ಳುವ ಹೊಣೆಯ ಅಂಗವಾಗಿ ಕಾಞಂಗಾಡಿನ ಉಪಜಿಲ್ಲಾಧಿಕಾರಿ ಮತ್ತು ಕಾಸರಗೋಡು ಆರ್.ಡಿ.ಒ. ಅವರ ನೇತೃತ್ವದಲ್ಲಿ ಎರಡು ಕ್ವರೋನಾ ಕಂಟ್ರೋಲ್ ದಳಗಳನ್ನು ರಚಿಸಲಾಗಿದೆ. ಇದರಲ್ಲಿ ಒಬ್ಬ ಎಸ್.ಐ, ಇಬ್ಬರು ಪೆÇಲೀಸರೂ ಇದ್ದಾರೆ. ಆದೇಶ ಉಲ್ಲಂಘನೆಗೆ ಕಾರವಾದ ಸಮಾರಂಭ ನಡೆಸಿದ ವ್ಯಕ್ತಿಯನ್ನು ತಕ್ಷಣ ವಶಕ್ಕೆ ತೆಗೆದುಕೊಂಡು , ಕಾನೂನು ರೀತ್ಯಾ ಶಿಕ್ಷೆ ವಿಧಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಮಾಹಿತಿ ಸಾರ್ವಜನಿಕರ ಅವಗಾಹನೆಗಾಗಿ ನೀಡಲಾಗಿದೆ ಎಂದವರು ನುಡಿದರು

