HEALTH TIPS

ಕೊರೋನಾ: ಜಾರಿಯಲ್ಲಿರುವ ಜಾಗರೂಕ ಕ್ರಮಗಳ ಮುಂದುವರಿಕೆಗೆ ನಿರ್ಧಾರ


         ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಈಗ ಜಾರಿಗೊಳಿಸಲಾಗುತ್ತಿರುವ ಜಾಗರೂಕತೆಯ ಕ್ರಮಗಳನ್ನು ಮುಂದುವರಿಸಲು ಮತ್ತು ಆರೋಗ್ಯ-ಪೆÇಲೀಸ್ ಇಲಾಖೆಯ ಸಹಾಯದೊಂದಿಗೆ ನಿಗಾ-ಪ್ರತಿರೋಧ ಚಟುವಟಿಕೆಗಳನ್ನು ಬಲಪಡಿಸಲು ನಿರ್ಧರಿಸಲಾಗಿದೆ. 
       ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಹಿರಿಯ ಅಧಿಕಾರಿಗಳ ಸಭೆ ಈ ನಿರ್ಧಾರ ಕೈಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
   ರೋಗ ಹರಡುವಿಕೆಯನ್ನು ವೈಜ್ಞಾನಿಕ ರೀತಿ ತಡೆಯಲು ಅಗತ್ಯವಿರುವ ಎಲ್ಲ ಸಜ್ಜೀಕರಣ ನಡೆಸಲಾಗುವುದು. ಎಲ್ಲ ವಲಯಗಳಲ್ಲಿರುವವರು ಈಗಾಗಲೇ ತಿಳಿಸಲಾದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದೇಶಗಳಿಂದ ಊರಿಗೆ ಮರಳಿದವರು ಜಿಲ್ಲಾ ಕರೋನಾ ನಿಯಂತ್ರಣ ಘಟಕವನ್ನು ಯಾ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಟುಂಬ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಯಲ್ಲಿರುವ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು. ಜನತೆಯಲ್ಲಿ ಮೂಡಿರುವ ಆತಂಕ ನಿವಾರಣೆ ಉದ್ದೇಶದಿಂದ ರಚಿಸಲಾದ ಜನಜಾಗೃತಿ ಸಮಿತಿಗಳನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಸಭೆ ತಿಳಿಸಿದೆ.
        ಕೊರೋನಾ ಹಾವಳಿ ತಲೆದೋರಿರುವ ಪ್ರದೇಶಗಳಿಂದ ಮತ್ತು ವಿದೇಶಗಳಿಂದ ಊರಿಗೆ ಮರಳಿದ ಮಂದಿ ಜಿಲ್ಲಾ ಕರೋನಾ ಘಟಕ(ದೂರವಾಣಿ ಸಂಖ್ಯೆ: 9946000493.) ಕ್ಕೆ ಮಾಹಿತಿ ನೀಡಬೇಕು. ರೋಗ ಹರಡುವಿಕೆ ತಡೆಯುವ ಅಂಗವಾಗಿ ರೋಗ ಲಕ್ಷಣ ಕಂಡುಬಮದಲ್ಲಿ ಘಟಕಕ್ಕೆ ಮಾಹಿತಿ ನೀಡಿದ ನಂತರವಷ್ಟೇ ಆಸ್ಪತ್ರೆಗೆ ತೆರಳಬೇಕು. ಯಾವ ಕಾರಣಕ್ಕೂ ನಿಗಾ ಅವಧಿಯಲ್ಲಿ ಕೌಟುಂಬಿಕ ಸಮಾರಂಭಗಳಲ್ಲಿ, ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಕೂಡದು.
      ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂನಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಡಿ.ವೈ.ಎಸ್.ಪಿ.ಪಿ.ಬಾಲಕೃಷ್ಣನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ವಿ.ರಾಮದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ,ಮನೋಜ್ ಎ.ಟಿ. ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries