HEALTH TIPS

ಮೇ 30, 31ರಂದು ಕೇಂದ್ರೀಯ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆ

 
        ಕಾಸರಗೋಡು: ದೇಶದ ಹದಿನೈದು ಕೇಂದ್ರೀಯ ವಿಶ್ವ ವಿದ್ಯಾಲಯ, ನಾಲ್ಕು ರಾಜ್ಯ ವಿಶ್ವ ವಿದ್ಯಾಲಯ ಮತ್ತು ಒಂದು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಯುಜಿ ಯಲ್ಲಿ ವಿವಿಧ ಸಂಯೋಜಿತ(ಟಿ.ಐ.ಎನ್)ಪಿ.ಜಿ, ಎಂ.ಫಿಲ್ ಮತ್ತು ಪಿಎಚ್‍ಡಿ ಕಾರ್ಯಕ್ರಮಗಳ ಪ್ರವೇಶಾತಿ ಸಂಬಂಧಿಸಿ ಆಯೋಜಿಸಿರುವ ಕೇಂದ್ರೀಯ ವಿಶ್ವ ವಿದ್ಯಾನಿಲಯ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಸಿಇಟಿ-2020)ಮೇ 30ಮತ್ತು 31ರಂದು ನಡೆಯಲಿದೆ.
      ಕರ್ನಾಟಕ ಗಡಿ ಕೇರಳ ರಾಜ್ಯದ ಕಾಸರಗೋಡಿನಲ್ಲಿ 2009ರಲ್ಲಿ ಸ್ಥಾಪನೆಯಾಗಿರುವ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಒಟ್ಟು 27ಸ್ನಾತಕೋತ್ತರ ಪದವಿ ಮತ್ತು ಪಿಎಚ್‍ಡಿ, ಒಂದು ಪದವಿ ಶಿಕ್ಷಣದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
      ಕಳೆದ ಶೈಕ್ಷಣಿಕ ವರ್ಷದಿಂದ ಕನ್ನಡ ಸ್ನಾತಕೋತ್ತರ ಪದವಿ, ಪಿಎಚ್‍ಡಿ  ಮತ್ತು ಒಂದು ಪದವಿ ಶಿಕ್ಷಣದ ಕಾರ್ಯಕ್ರಮವನ್ನು ಆರಂಭಗೊಳಿಸಲಾಗಿದ್ದು, ಕೇರಳ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಪದವಿ ಶಿಕ್ಷಣ ಕೈಗೊಳ್ಳುತ್ತಿದ್ದಾರೆ. ಈ ಬಾರಿಯ ಪದವಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರವೇಶಾತಿ ಪಡೆಯಬಯಸುವ ಅಭ್ಯರ್ಥಿಗಳು ಕೇಂದ್ರೀಯ ವಿಶ್ವ ವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2020 ಏಪ್ರಿಲ್ 11ರ(ಟಿಈಸಿಇಸಿ-2020)ಕನ್ನಡ ಎಂ.ಎ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಎರಡು ವರ್ಷಗಳಲ್ಲಿ 50ಸಾವಿರ ರಊ. ವ್ಯಾಸಂಗ ವೇತನ ಲಭಿಸುತ್ತಿದೆ. ಇದಲ್ಲದೆ ಕೇರಳ ರಾಜ್ಯದ ಎಸ್‍ಸಿ, ಎಸ್‍ಟಿ, ಓಬಿಸಿ(ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷಕ್ಕೆ ಸೀಮಿತ)ವಿದ್ಯಾರ್ಥಿಗಳು ತಾವು ತರಗತಿ ಸೇರ್ಪಡೆ ಸಮಯದಲ್ಲಿ ಪಾವತಿಸಿದ ವಿದ್ಯಾರ್ಥಿ ಶುಲ್ಕವನ್ನು ಸಂಪೂರ್ಣವಾಗಿ ವಿದ್ಯಾರ್ಥಿವೇತನ ರೂಪದಲ್ಲಿ ಹಿಂಪಡೆಯುತ್ತಾರೆ.
               ಪ್ರವೇಶ ಪರೀಕ್ಷೆ:
     ಎರಡು ತಾಸುಗಳ ಅವಧಿಯ ಈ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರಲಿದೆ. ಕೇರಳ ರಆಜ್ಯದ ಕಾಸರಗೋಡು, ಕಣ್ಣೂರು(ತಲಶ್ಯೇರಿ)ಕೊಚ್ಚಿ, ಕೋಟ್ಟಾಯಂ, ಕೋಯಿಕ್ಕೋಡ್,  ಪಾಲಕ್ಕಾಡ್, ತಿರುವನಂತಪುರ, ತೃಶ್ಯೂರ್, ವಯನಾಡ್ ಮತ್ತು ಕರ್ನಾಟಕದ ಬೆಂಗಳೂರು(ಕಲ್ಪೆಟ್ಟ), ಬೆಳಗಾವಿ, ಬಳ್ಳಾರಿ, ಬೀದರ್, ದಾವಣಗೆರೆ, ಹುಬ್ಬಳ್ಳಿ, ಕಲಬುರ್ಗಿ, ಧಾರವಾಡ, ಮಂಗಳೂರು, ಮೈಸೂರು, ರಾಯಚೂರ್, ಯಾದಗಿರಿ ಸಹಿತ 11 ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಹತಾ ಪರೀಕ್ಷೆಗೆ ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.
     ಮಾರ್ಚ್ 16ರಿಂದ ಏಪ್ರಿಲ್ 11ರ ವರೆಗೆ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ, ಇಡಬ್ಲ್ಯೂಎಸ್/ಓಬಿಸಿಗೆ ರೂ. 800, ಪ.ಜಾತಿ, ಪ.ಪಂಗಡಕ್ಕೆ ರೂ. 350, ಪಿಡಬ್ಲ್ಯೂಡಿ ವರ್ಗದವರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಶುಲ್ಕದಲ್ಲಿ ಯಾವುದೇ ಮೂರು ವಿಶ್ವ ವಿದ್ಯಾಲಯದ ಮೂರು ಕಾರ್ಯಕ್ರಮಗಳಿಗೆ ಅರ್ಜಿಸಲ್ಲಿಸಲು ಅವಕಾಶವಿರುವುದಾಗಿ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries