HEALTH TIPS

ಕೊರೊನಾ: ಕೇರಳದಲ್ಲಿ ಹೊಸ ಪ್ರಕರಣವಿಲ್ಲ-ಜಾಗ್ರತೆ ಪಾಲಿಸಲು ಸಿಎಂ ಮನವಿ

 
      ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ವೈರಸ್‍ನ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.  ರಾಜ್ಯದಲ್ಲಿ 25603ಮಂದಿಯನ್ನು ನಿಗಾದಲ್ಲಿರಿಸಲಾಗಿದ್ದು, ಇವರಲ್ಲಿ 25366ಮಂದಿ ಮನೆಗಳಲ್ಲಿ ಹಾಗೂ 237ಮಂದಿ ಆಸ್ಪತ್ರೆಯಲ್ಲಿದ್ದಾರೆ. ಬುಧವಾರ ಶಂಕಿತ 57ಮಂದಿಯನ್ನು  ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 7861ಮಂದಿ ಹೊಸದಾಗಿ ನಿಗಾದಲ್ಲಿದ್ದಾರೆ.4622ಮಂದಿಯಲ್ಲಿ ಯಾವುದೇ ವೈರಸ್‍ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ, ಇವರನ್ನು ನಿಗಾದಿಮದ ಹೊರತುಪಡಿಸಲಾಗಿದೆ.
2550ರಕ್ತದ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, ಇದರಲ್ಲಿ 2140ಫಲಿತಾಂಶ ನೆಗೆಟಿವ್ ಆಗಿದೆ. ಮತ್ತಷ್ಟು ಮಂದಿಯನ್ನು ತಪಾಸಣೆಗೆ ಒಳಪಡಿಸುವ ಮೂಲಕ ವೈರಸ್ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವಲ್ಲಿ ಆರೋಗ್ಯ ಇಲಾಖೆ ಸಹಿತ ವಿವಿಧ ಸಚಿವಾಲಯದ ಜತೆಗೆ ಜನರೂ ಕೈಜೋಡಿಸಬೇಕು. ಹತೋಟಿ ಮೀರಿದಲ್ಲಿ, ಭಾರಿ ದುರಂತಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಜಾಗ್ರತೆ ಪಾಲಿಸುವುದು ಅನಿವಾರ್ಯ. ಕರೊನಾ ವಿಷಯದಲ್ಲಿ ಜನತೆ ಭಯಭೀತರಾಗಬೇಕಾದ ಅಗತ್ಯವಿಲ್ಲ. ಆರೋಗ್ಯ ಇಲಾಖೆ ನಿರ್ದೇಶ ಪಾಲನೆಯೊಂದಿಗೆ ವೈಯಕ್ತಿಕ ಶುಚೀಕರಣಕ್ಕೆ ಆದ್ಯತೆ ನೀಡಬೇಕು. ವೈರಸ್ ಸೋಂಕೊನ ಬಗ್ಗೆ ನಿಗಾದಲ್ಲಿರುವವರು, ಇಚ್ಛಾನುಸಾರ ನಡೆದುಕೊಳ್ಳದೆ ಆರೋಗ್ಯ ಇಲಾಖೆ ಸೂಚನೆ ಪಾಲಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries