HEALTH TIPS

ಕೊರೊನಾ-ಮಾಸ್ಕ್ ತಯಾರಿಯಲ್ಲಿ ತೊಡಗಿಸಿಕೊಂಡ ಕುಟುಂಬಶ್ರೀ ಘಟಕಗಳು

 
       ಕಾಸರಗೋಡು:ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವ ಯತ್ನಗಳ ಅಂಗವಾಗಿ ಕುಟುಂಬಶ್ರೀ ಘಟಕಗಳು ಜಿಲ್ಲೆಯಾದ್ಯಂತ ಹತ್ತಿಯ ಮಾಸ್ಕ್ ಗಳನ್ನು, ಹ್ಯಾಂಡ್ವಾಷ್, ಸಾನಿಟೈರ್ ಇತ್ಯಾದಿಗಳ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಮಧ್ಯೆ, ಮಾಸ್ಕ್‍ಗೆ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನಹರಿಸಿ, ಕುಟುಂಬಶ್ರೀ ಘಟಕಗಳ ಮೂಲಕ ಮಾಸ್ಕ್ ನಿರ್ಮಾಣಕ್ಕೆ ಗುರಿಯಿರಿಸಿಕೊಮಡಿದೆ.  ಕುಟುಂಬಶ್ರೀಯ 25 ಘಟಕಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ. ಘಟಕವೊಂದರಿಂದ ದಿನಕ್ಕೆ 450ರಿಂದ 500ಹತ್ತಿಯ ಮಾಸ್ಕ್ ನಿರ್ಮಾಣವಾಗುತ್ತಿವೆ.
       2 ಲೇಯರ್, 3ಲೇಯರ್‍ಎಂಬ ವಿಧದ ಮಾಸ್ಕ್ ಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. 15ರೂ.ಮತ್ತು 20 ರೂ. ಬೆಲೆಯಂತೆ ಸಾರ್ವಜನಿಕರಿಗೆ ಇವು ಮಾರಾಟ ಮಾಡಲಾಗುತ್ತದೆ. ಬಿಸಿನೀರಲ್ಲಿ ಅದ್ದಿ ಅಣು ಮುಕ್ತಗೊಳಿಸುವ ರೀತಿ ತಯಾರಿಸಲಾಗಿದ್ದು, ಈ ನಿಟ್ಟಿನಲ್ಲಿ ಮರುಬಳಕೆಗೆ ಅವಕಾಶವಿದೆ.  ಜಿಲ್ಲೆಯ ಗ್ರಾಮಪಂಚಾಯಿತಿ, ನಗರಸಭೆ, ಕುಟುಂಬಶ್ರೀ ಕಚೇರಿಗಳಲ್ಲಿ ಆರಂಭಿಸಲಾಗುವ ಕೌಂಟರ್ ಗಳಲ್ಲಿ ಸಾರ್ವನಿಕರಿಗೆ ಈ ಉತ್ಪನ್ನಗಳು ಲಭ್ಯವಾಗಲಿವೆ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಈ ಮಾಸ್ಕ್‍ಗಳು ಗ್ರಾಹಕರಿಗೆ ಲಭಿಸಲಿವೆ. 40 ರೂ.ಗೆ ಹ್ಯಾಂಡ್ ವಾಷ್200 ಮಿ.ಲೀ. ಹ್ಯಾಂಡ್ ವಾಷ್ ಇಲ್ಲಿ 40 ರೂ. ಮತ್ತು 200 ಮಿ.ಲೀ. ಸಾನಿಟೈಸರ್ 135 ರೂ. ಬೆಲೆಗೆ ಲಭ್ಯವಿರಲಿದೆ. ಚೆಂಗಳ, ಚೆರುವತ್ತೂರು ಕುಟುಂಬಶ್ರೀ ಘಟಕಗಳು ಈ ಉತ್ಪನ್ನಗಳನ್ನು ತಯಾರಿಸುತ್ತಿವೆ. ಇವನ್ನು ಇನ್ನಷ್ಟು ಕಡೆ ವಿಸ್ತರಣೆಗೊಳಿಸುವ ಉದ್ದೇಶವಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries