HEALTH TIPS

ಮಾ.31 ರ ವರೆಗೆ ರೈಲು ಗಾಡಿ ನಿಲುಗಡೆ


       ಕಾಸರಗೋಡು: ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಮಾ.31 ರ ವರೆಗೆ ರೈಲುಗಾಡಿಗಳ ಸೇವೆ ನಿಲುಗಡೆಗೊಳಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ರೈಲ್ವೇ ಬೋರ್ಡ್ ಚೆಯರ್‍ಮೇನ್ ವಿ.ಕೆ.ಯಾದವ್ ವಲಯ ಜನರಲ್ ಮೆನೇಜರ್‍ಗಳೊಂದಿಗೆ ನಡೆಸಿದ ವೀಡಿಯೋ ಕಾನರೆನ್ಸ್‍ನಲ್ಲಿ ಸರ್ವೀಸ್ ನಿಲುಗಡೆಗೊಳಿಸಲು ತೀರ್ಮಾನಿಸಲಾಯಿತು.
      ಪ್ರಸ್ತುತ ರೈಲು ಸಾರಿಗೆ ನಿಯಂತ್ರಣ ರವಿವಾರ ರಾತ್ರಿ 10 ಗಂಟೆಗೆ ಮುಗಿದಿರುವುದರಿಂದ ಮಾ.31 ರ ರಾತ್ರಿ ವರೆಗೆ ರೈಲು ಸೇವೆಯನ್ನು ಪೂರ್ಣವಾಗಿ ನಿಲುಗಡೆಗೊಳಿಸಲಾಗುವುದು. ರವಿವಾರ ರಾತ್ರಿ 12 ರಿಂದ ರೈಲು ಸರ್ವೀಸ್ ನಿಲುಗಡೆಗೆ ತೀರ್ಮಾನಿಸಲಾಗಿದೆ. ಪ್ರಸ್ತುತ ಓಡುತ್ತಿರುವ ರೈಲುಗಾಡಿಗಳು ನಿಗದಿತ ಸ್ಥಳಕ್ಕೆ ತಲುಪಿದ ಬಳಿಕ ಸರ್ವೀಸ್ ಕೊನೆಗೊಳ್ಳಲಿದೆ.
       ರೈಲು ಪ್ರಯಾಣದ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries