ಪೆರ್ಲ:ಗಡಿನಾಡ ಧ್ವನಿ, ಗಡಿನಾಡ ಶ್ರೆಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಏ.4 ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ನೂತನ ಸಭಾಂಗಣದಲ್ಲಿ 6ನೇ 'ಕರ್ನಾಟಕ ಗಡಿನಾಡ ಸಮ್ಮೇಳನ -2020' ನಡೆಯಲಿದ್ದು ಎರಡನೇ ಪೂರ್ವಭಾವಿ ಸಭೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ವಠಾರದಲ್ಲಿ ನಡೆಯಿತು.
ಸ್ವಾಗತ ಸಮಿತಿ ಅಧ್ಯಕ್ಷ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೆಶ್ವರ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಹಾ ಸಮ್ಮೇಳನದ ಯಶಸ್ವಿಗೆ ರೂಪುರೇಷೆ ತಯಾರಿ, ಚರ್ಚೆ ನಡೆಯಿತು.
ಸಮಿತಿ ಉಪಾಧ್ಯಕ್ಷ ಸಿ.ಸಂಜೀವ ರೈ, ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ, ಮೊಕ್ತೇಸರ ಸುಬ್ರಹ್ಮಣ್ಯ ಭಟ್ ಕೋಡುಮಾಡು, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ ಸಂಚಾಲಕ ಮಧ್ವಾಧೀಶ ವಿಠಲದಾಸ (ರಾಮಕೃಷ್ಣ ಕಾಟುಕುಕ್ಕೆ), ತಾರನಾಥ ರೈ ಪೆರ್ಲ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಕೆ., ಶಿಕ್ಷಕ, ಕಾಟುಕುಕ್ಕೆ ಭಜನಾ ಸಂಘ ಅಧ್ಯಕ್ಷ ಲೊಕನಾಥ ಶೆಟ್ಟಿ ಮಾಯಿಲೆಂಗಿ, ಉಪನ್ಯಾಸಕಿ ವಾಣಿ ಜಿ.ಶೆಟ್ಟಿ, ವಿನೋಬ ಶೆಟ್ಟಿ ದಂಬೆಕಾನ, ಬಿ.ಎಸ್.ಗಾಂಭೀರ, ಗೋಪಾಲ ಶೆಟ್ಟಿ ದಂಬೆಕಾನ, ವೀಣಾ ರಾವ್, ಅರುಣಾ ಶಿವರಾಮ ಭಟ್ ಪಡ್ಪು, ಗೀತಾ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಈಶ್ವರ ಭಟ್ ಕದಂದೇಲು, ಪ್ರಸಾದ್ ನಡುಕಟ್ಟ, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನದ ಸಂಯೋಜಕ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಾಹಿತಿ ರಾಜಶ್ರೀ ಟಿ.ರೈ ವಂದಿಸಿದರು.



