ಬದಿಯಡ್ಕ: ಮುಳ್ಳೇರಿಯಾ ಹವ್ಯಕ ಮಂಡಲದ ನೀರ್ಚಾಲು ಹವ್ಯಕ ವಲಯ ತಿಂಗಳ ಸಭೆ ಕಜೆಮೂಲೆ ಗೋಪಾಲಕೃಷ್ಣ ಭಟ್ ಇವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆ,ಕರಾವಲಂಬನ ಸ್ತೋತ್ರ ಪಾರಾಯಣ, ಗೋಸ್ತುತಿಯೊಂದಿಗೆ ಸಭೆ ಆರಂಭವಾಯಿತು.
ವಲಯ ಕಾರ್ಯದರ್ಶಿ ಮಹೇಶ ಕೃಷ್ಣ ತೇಜಸ್ವಿ ಗತ ಸಭೆಯ ವರದಿಯನ್ನು ಮಂಡಿಸಿದರು. ವಲಯ ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ ಮಾಸಿಕ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀ ರಾಮಚಂದ್ರಾಪುರ ಮಠ, ಹೊಸನಗರದಲ್ಲಿ ಏ.1 ರಂದು ರಾಮೋತ್ಸವದ ಅಂಗವಾಗಿ ಸೀತೋತ್ಸವದಲ್ಲಿ ಮಾತೃಸಮಾವೇಶವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಸಮಾರಂಭವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಲಾಯಿತು. ಮಾರ್ಚ್ 15ರಿಂದ 17ರವರಿಗೆ ಶ್ರೀ ದುಗಾರ್ಂಬಿಕಾ ದೇವಸ್ಥಾನ ಹೈಗುಂದದಲ್ಲಿ ಜರಗುವ ಅಷ್ಟಬಂಧ-ಪುನಃಪ್ರತಿಷ್ಠಾ- ಬ್ರಹ್ಮಕಲಶೋತ್ಸವ, ಮಾಣಿಮಠದಲ್ಲಿ ಮಾರ್ಚ್ 30ರಂದು ಜರಗಲಿರುವ ಯೋಗಪಟ್ಟಾಭಿಷೇಕ ದಿನಾಚರಣೆ ಮಹಾಪಾದುಕಾ ಪೂಜೆ ಇವುಗಳ ಮಾಹಿತಿಯನ್ನು ತಿಳಿಸಲಾಯಿತು.
ವಿಷ್ಣುಗುಪ್ತ ವಿಶ್ವ ವಿದ್ಯಾಲಯದ ನಿರ್ಮಾಣ ಕಾರ್ಯದ ಸಲುವಾಗಿ ಅಭಿಯಾನ ಮತ್ತು ವಲಯದಿಂದ ಸರ್ವವಿಧ ಸಹಕಾರವನ್ನು ಕೈಗೊಳ್ಳಲು ಸಮಾಲೋಚಿಸಿ ತೀರ್ಮಾನಿಸಲಾಯಿತು. ಶ್ರೀ ಗುರುಪೀಠದಿಂದ ಬಂದ ವಿಶೇಷ ಸುತ್ತೋಲೆಯ ವಿಚಾರಗಳನ್ನು ತಿಳಿಸಲಾಯಿತು.
ಮುಳ್ಳೇರಿಯಾ ಮಂಡಲ ಶಿಷ್ಯಮಾಧ್ಯಮ ವಿಭಾಗದ ಪ್ರಮುಖ ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದು ಶ್ರೀಮಠದ ವಿವಿಧ ಯೋಜನೆಗಳ ಸಮಗ್ರ ಮಾಹಿತಿಯನ್ನು ನೀಡಿದರು. ಮುಳ್ಳೇರಿಯಾ ಮಂಡಲ ಸಹಾಯ ವಿಭಾಗದ ಸರಳಿ ಮಹೇಶ ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದ ಮತ್ತು ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.


