ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.
ಎಣ್ಮಕಜೆ ಗ್ರಾ.ಪಂ.ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಯಂ.ದೀಪ ಬೆಳಗಿಸಿ ಸಮಾರೋಪ ಸಮಾರಂಭ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಪೂಕರೆ ಅಧ್ಯಕ್ಷತೆ ವಹಿಸಿದರು. ಡಿ.ಪಿ.ಸಿ.ಅಧಿಕಾರಿ ನಾರಾಯಣ ಮಾಸ್ತರ್, ಸಿ.ಆರ್.ಸಿ. ಸಂಯೋಜಕಿ ಸುಪ್ರಿಯಾ ಶುಭ ಹಾರೈಸಿದರು. ತರಗತಿ ಹಾಗೂ ಶಾಲಾ ಮಟ್ಟದಲ್ಲಿ ಮಕ್ಕಳ ಕಲಿಕಾ ಸಾಮಥ್ರ್ಯ ಪ್ರದರ್ಶನ ನಡೆಯಿತು. ಕುಂಬಳೆ ಬ್ಲಾಕ್ ಕಾರ್ಯಕ್ರಮ ನಿರೂಪಣಾಧಿಕಾರಿ ಶಿವರಾಮ, ಮಾತೃ ಸಂಘ ಅಧ್ಯಕ್ಷೆ ಪ್ರಿಯಾ ಚಾಕಟಕುಮೇರಿ, ರಕ್ಷಕರು, ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಹಿರಿಯ ಶಿಕ್ಷಕ ವೆಂಕಟ ವಿದ್ಯಾಸಾಗರ ವಂದಿಸಿದರು.


