ಮುಳ್ಳೇರಿಯ: ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣಾ ಇಲಾಖೆ ಆಯೋಜಿಸಿದ ಸಂಸ್ಕೃತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಜೆ., ವೈಭವಿ ಜೆ., ಮತ್ತು 8ನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ ಕೆ.ಉತ್ತೀರ್ಣರಾಗಿದ್ದು ಸ್ಕಾಲರ್‍ಶಿಪ್ ಗೆ ಅರ್ಹತೆ ಪಡೆದಿದ್ದಾರೆ.