ನವದೆಹಲಿ: ಕೊರೋನಾ ವೈರತ್ ದೇಶೀಯ ಮಾರುಕಟ್ಟೆಯ ಮೇಲೂ ಗಂಭೀರ ಪರಿಣಾಮ ಬೀರಲು ಆರಂಭಿಸಿದ್ದು, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ತೈಲ ದರ ದಿನೇ ದಿನೇ ಇಳಿಯಾಗುತ್ತಿದೆ.
ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.70.59ಕ್ಕೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ರೂ.71 ಗಿಂತ ಕೆಳಗೆ ಇಳಿದಿದ್ದು ಕಳದ 8 ತಿಂಗಳಲ್ಲಿ ಇದೇ ಮೊದಲಾಗಿದೆ.
ಫೆ.27ರಿಂದ ಪೆಟ್ರೋಲ್ ದರ ಇಳಿಕೆಯಾಗುತ್ತಲೇ ಇದ್ದು, ಪೆಟ್ರೋಲ್ ದರ ಪ್ರತಿ ಲೀಟಲ್ ಮೇಲೆ ರೂ.1.42 ಹಾಗೂ ಡೀಸೆಲ್ ದರ ರೂ.1.44ನಷ್ಟು ಕುಸಿತ ಕಂಡಿದೆ. ಬೆಂಗಳೂರಿನಲ್ಲೂ ಪೆಟ್ರೋಲ್ ದರ ಲೀಟರ್'ಗೆ 25 ಪೈಸೆ ಇಳಿಕೆಯಾಗಿದ್ದು, ರೂ.72.70 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರೂ. 65.16 ಆಗಿದೆ.


