ಕಾಸರಗೋಡು: ಜೈವಿಕ ಬದುಕಿಗೆ ನಾಂದಿ ಹಾಡಿ, ಬಂಜರು ಭೂಮಿಯನ್ನು ಹಸನಾಗಿಸಿ, ಸಮೃದ್ಧ ತರಕಾರಿ ಬೆಳೆದು ಸ್ವಾವಲಂಬಿತನದಿಂದ ಪಳ್ಳಿಕ್ಕರೆ ಗ್ರಾಮಪಂಚಾಯತಿ ಮಾದರಿಯಾಗುತ್ತಿದೆ.
ಸುಡುವ ಬಿಸಿಲಿನ ನಡುವೆಯೂ ಬಂಜರು ಜಾಗವನ್ನು ಹಸುರಾಗಿಸಿ ನಳನಳಿಸುವ ತರಕಾರಿ ಸಮೃದ್ಧಿಪಡೆದ ಹೆಗ್ಗಳಿಕೆಯೊಂದಿಗೆ ಪಳ್ಳಿಕ್ಕರೆ ಗ್ರಾಮಪಂಚಾಯತ್ ಪ್ರಕಾಶಿಸುತ್ತಿದೆ. 4 ವರ್ಷಗಳ ಹಿಂದೆ ಬಂಜರು ಭೂಮಿಯನ್ನು ಕೃಷಿಯೋಗ್ಯ ವಾಗಿಸುವ ಯಜ್ಞಕ್ಕೆ ಗ್ರಾಮಪಂಚಾಯತ್ ತೊಡಗಿಕೊಂಡಿತ್ತು. "ಜೈವಿಕ ಬದುಕು", ಹರಿತ ಪಳ್ಳಿಕ್ಕರೆ" ಇತ್ಯಾದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ತರಕಾರಿ ಬೆಳೆ, ಫಲ ನೀಡಬಲ್ಲ ಮರವಾಗಬಲ್ಲ ಸಸಿಗಳ ವಿತರಣೆ, ಭತ್ತದ ಕೃಷಿ ವಿಸ್ತರಣೆ ಇತ್ಯಾದಿಗಳನ್ನು ಇಲ್ಲಿ ಆರಂಭಿಸಲಾಗಿತ್ತು. ಜೈವಿಕ ಬದುಕಿನೊಂದಿಗೆ ಆರೋಗ್ಯಯುತ ಆಹಾರ ಪಡೆಯುವ ಬಗ್ಗೆ ಜನಜಾಗೃತಿ ಮೂಡಿಸಿ, ಸಾರ್ವಜನಿಕ ಆರೋಗ್ಯ ಖಚಿತಪಡಿಸುವ ಉದ್ದೇಶದಿಂದ ತೊಡಗೊಕೊಂಡ ಯೋಜನೆಗಳು ಯಶಸ್ವಿಯಾಗಿವೆ.
10 ಸೆಂಟ್ಸ್ ಗಿಂತ ಅಧಿಕ ಜಾಗವಿರುವ ಪ್ರದೇಶಗಳಲ್ಲಿ ಕೃಷಿಗೆ ಸಬ್ಸಿಡಿ ನೀಡಿ ಬಂಜರು ಭೂಮಿ ರಹಿತ ಗ್ರಾಮಪಂಚಾಯತ್ ಆಗಿ ಪಳ್ಳಿಕ್ಕರೆಯನ್ನು ಮಾರ್ಪಡಿಸುವ ಯೋಜನೆಗೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಲಾಗಿತ್ತು. ಸ್ಥಳೀಯ ಕೃಷಿಕರಿಗೆ ಈ ಸಾಲಿನಲ್ಲಿ ಗ್ರೋ ಬ್ಯಾಗ್ಗಳನ್ನು, ವಿವಿಧ ತರಕಾರಿ ಸಸ್ಯಗಳನ್ನು ವಿತರಣೆ ನಡೆಸಲಾಗಿತ್ತು. ಈ ಹಿಂದೆ ಕಲ್ಲಂಗಡಿ, ಹೋಕೋಸು ಇತ್ಯಾದಿಗಳನ್ನು ಬೆಳೆಯುವಲ್ಲಿ ಹೆಸರುವಾಸಿಯಾಗಿದ್ದ ಸ್ಥಳೀಯ ಕೃಷಿಕರಿಗೆ ಮತ್ತದೇ ಕೃಷಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೆÇ್ರೀತ್ಸಾಹ ನೀಡಲಾಗುತ್ತಿದೆ. ಮಧ್ಯಾವಧಿ ಬೆಳೆಯ ರೂಪದಲ್ಲಿ ಬಾಳೆ, ಹಳದಿ, ಶುಂಠಿ, ಸುವರ್ಣಗೆಡ್ಡೆ ಸಹಿತ ಬೀಜಗಳನ್ನು ಕೃಷಿಭವನ ಮೂಲಕ ವಿತರಣೆ ನಡೆಸಲಾಗಿದೆ. ಗುಂಪು ಕೃಷಿಕರಿಗೂ, ಸ್ವಯಂಸೇವಾ ಸಂಘಟನೆಗಳಿಗೂ ತರಕಾರಿ, ಭತ್ತದ ಕೃಷಿಗೆ ಬೇಕಾದ ಸಬ್ಸಿಡಿ ನೀಡಲಾಗುತ್ತಿದೆ.
ಭತ್ತದ ಕೃಷಿಯ ಕೂಲಿ ವೆಚ್ಚ, ಉತ್ತು ಜಾಗ ಹಸನಾಗಿಸುವ, ಕುಮ್ಮಾಯ ಬೆರೆಸುವ ಇತ್ಯಾದಿ ಕಾಯಕಗಳಿಗೆ ಹೆಕ್ಟೇರ್ ಒಂದಕ್ಕೆ ತಲಾ 1700 ರೂ. ನೀಡಲಾಗುತ್ತಿದೆ. ವಿವಿಧ ಕೃಷಿ ವಿಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೌಕರಿ ಖಾತರಿ ಯೋಜನೆಯಲ್ಲಿ ಅಳವಡಿಸಿ 25 ಕೃಷಿ ಕೆರೆಗಳನ್ನು, 15 ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಇಕೋ ಶಾಪ್ ಗಳ ಮೂಲಕ,ಕೃಷಿಭವನದ ಸ್ಟಾಲ್ ಗಳ ಮೂಲಕ ಕೃಷಿ ಉತ್ಪನ್ನಗಳನ್ನು ನೇರವಾಗಿ ಕೃಷಿಕರಿಂದ ಗ್ರಾಹಕರಿಗೆ ನ್ಯಾಯಬೆಲೆಗೆ ತಲಪಿಸಲಾಗುತ್ತಿದೆ.
ವವಿಧ ಜನಪರ ಯೋಜನೆಗಳ ಮೂಲಕ ತರಕಾರಿ ಕೃಷಿಯಲ್ಲಿ ಸ್ವಾವಲಂಬಿಯಾಗ ಬಹುದು ಎಂಬುದನ್ನು ಪಳ್ಳಿಕ್ಕರೆ ಗ್ರಾಮಪಂಚಾಯತ್ ಕ್ರಿಯಾತ್ಮಕವಾಗಿ ತೋರಿಕೊಟ್ಟಿದೆ.


