ಕುಂಬಳೆ: ಅರಿಕ್ಕಾಡಿ ಸಮೀಪದ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಸಂಜೆ ಏರ್ಪಡಿಸಿದ ಮಾತೃಸಂಗಮ ಮಾತೃತ್ವದ ಶಕ್ತಿ ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ದಿವ್ಯ ಉಪಸ್ಥಿತರಿದ್ದರು. ಶ್ರೀ ಗುರುನಾಥ ಸ್ವಾಮಿ ವೇದಿಕೆಯಲ್ಲಿ ಜರಗಿದ ಮಾತೃ ಸಂಗಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ವಿಶ್ವ ಬ್ರಾಹ್ಮಣ ಮಾತೃ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ ಆಚಾರ್ಯ ಸಭೆಯ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಅಧ್ಯಾಪಕಿ ಪ್ರೇಮಲತಾ ಮೋಹನದಾಸ ಆಚಾರ್ಯ ಕೋಟೆಕ್ಕಾರ್ ಧಾರ್ಮಿಕ ಉಪನ್ಯಾಸಗೈದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಡಾ.ಲಾವಣ್ಯದೇವಿ ಬೆಂಗಳೂರು, ಇಂದಿರಾ ಪುರುಷೋತ್ತಮ ಆಚಾರ್ಯ ಪುತ್ತೂರು, ಪ್ರಭಾವತಿ ಕೆದಿಲಾಯ ಪುಂಡೂರು, ಬೇಬಿ ಇತ್ತಿಕ್ಕಾಲುಮೂಲೆ, ಕನಕ ಪ್ರಭಾಕರ ಆಚಾರ್ಯ ಕೋಟೆಕ್ಕಾರ್, ವನಿತಾ ತುಕಾರಾಮ ಆಚಾರ್ಯ ಕೊಂಡೆವೂರು, ಸುಶೀಲಾ ಮಾಧವ ಆಚಾರ್ಯ ಚೆನ್ನಿಕ್ಕರೆ, ಚೇತನಾ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ಹರಿಶ್ಚಂದ್ರ ಆಚಾರ್ಯ ಬೇಕೂರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ತ್ರಿವೇಣಿ ದೇವರಾಜ ಆಚಾರ್ಯ ಕುಬಣೂರು ಸ್ವಾಗತಿಸಿ, ಅರ್ಪಿತಾ ಲಕ್ಷ್ಮಿಪ್ರಸಾದ್ ಆಚಾರ್ಯ ಕೆಳಗಿನಮನೆ ನಿರೂಪಿಸಿದರು.



