ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು 20 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬುಧವಾರ ಬೆಳಗ್ಗೆ 10 ಕ್ಕೆ ವಾದ್ಯಘೋಷದೊಂದಿಗೆ ಹಸಿರುವಾಣಿ ಸಮರ್ಪಣೆ, 10.30ಕ್ಕೆ ಧ್ವಜಾರೋಹಣ ನಡೆಯಿತು. 11ಕ್ಕೆ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರಿಂದ ಧಾರ್ಮಿಕ ಭಾಷಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.
ಮಾ.13 ರಂದು ಸಂಜೆ 7ಕ್ಕೆ ಗಣಪತಿ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, 14 ರಂದು ಬೆಳಗ್ಗೆ 7ಕ್ಕೆ ಪೂಜೆ, 9 ರಿಂದ ರುದ್ರಪಾರಾಯಣ, 11ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6 ರಿಂದ ಭಜನೆ, 7 ರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ, ರಾತ್ರಿ 9 ರಿಂದ ಉತ್ಸವ ಬಲಿ, ತುಲಾಭಾರ ಪ್ರಾರ್ಥನೆ, ಪೂಜೆ, ಶ್ರೀ ಭೂತಬಲಿ ನಡೆಯುವುದು.
ಮಾ.15 ರಂದು ಬೆಳಗ್ಗೆ 6ಕ್ಕೆ ದರ್ಶನ ಬಲಿ, 9 ರಿಂದ ರುದ್ರಪಾರಾಯಣ, 11 ರಿಂದ ತುಲಾಭಾರ ಸೇವೆ, 11.15 ರಿಂದ ಭಜನೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ. ಪ್ರಸಾದ ವಿತರಣೆ, ಅನ್ನದಾನ, ಮಧ್ಯಾಹ್ನ 1 ರಿಂದ ಗಾನ ಸಂಗೀತ ಸುಧಾ, ಸಂಜೆ 6ರಿಂದ ಭಜನೆ, 7 ರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ, ರಾತ್ರಿ 9 ರಿಂದ ಉತ್ಸವ ಬಲಿ, ತುಲಾಭಾರ ಪ್ರಾರ್ಥನೆ, ಪೂಜೆ, ಶ್ರೀ ಭೂತಬಲಿ ಜರಗಲಿದೆ.
ಮಾ.19 ರಂದು ಬೆಳಗ್ಗೆ 8ಕ್ಕೆ ಬೀರತಂಬಿಲ, ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ನೇಮ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ ಅತ್ತನಾಡಿ ಮತ್ತು ಚೀನಪ್ಪಾಡಿ ತರವಾಡಿನಿಂದ ಭಂಡಾರ ತರುವುದು, ಮಾ.20 ರಂದು ಬೆಳಗ್ಗೆ 7ರಿಂದ ಶ್ರೀ ಚಾಮುಂಡಿ ದೈವ ನರ್ತನ, ಪ್ರಸಾದ ವಿತರಣೆ, 10 ರಿಂದ ಶ್ರೀ ರಕ್ತೇಶ್ವರೀ ದೈವ ನರ್ತನ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 5ರಿಂದ ಶ್ರೀ ವಿಷ್ಣುಮೂರ್ತಿ ದೈವ ನರ್ತನ ಸೇವೆ, ಪ್ರಸಾದ ವಿತರಣೆ, ಸಂಜೆ 6.30ಕ್ಕೆ ಭಂಡಾರವನ್ನು ಅತ್ತನಾಡಿ ಮತ್ತು ಚೀನಪ್ಪಾಡಿಗೆ ಹಿಂತಿರುಗಿಸಿ ಒಪ್ಪಿಸುವುದು ನಡೆಯಲಿದೆ.

