ಕಾಸರಗೋಡು: ಜಿಲ್ಲೆಯಲ್ಲಿ ಕರೊನಾ ವೈರಸ್ ಹಿನ್ನೆಲೆಯಲ್ಲಿ ಭಾನುವಾರ 762 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 41 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 14 ಪೆÇಸೆಟಿವ್ ಕೇಸುಗಳು ಇವೆ. ಭಾನುವಾರ ನೂತನವಾಗಿ 5 ಕೇಸುಗಳು ಪೆÇಸೆಟಿವ್ ಆಗಿವೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಐಸೊಲೇಷನ್ ಸೌಲಭ್ಯ ಏರ್ಪಡಿಸಲಾಗಿದೆ. ಪೆರಿಯ, ಪೂಡಂಗಲ್ಲು ಪ್ರದೇಶಗಳಲ್ಲಿ ಐಸೊಲೇಷನ್ ಸೆಂಟರ್ ಆರಂಭಿಸಲಾಗಿದೆ. ಜತೆಗೆ ಕೇರ್ವೆಲ್ ಆಸ್ಪತ್ರೆ, ಜನರಲ್ ಆಸ್ಪತ್ರೆ ಗಳಲ್ಲಿ ಐಸೊಲೇಷನ್ ಸೌಲಭ್ಯ ಏರ್ಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ಸೌಲಭ್ಯ ವಿಸ್ತರಣೆಗೊಳಿಸಲಾಗಿದೆ.
ಜಾಗ್ರತೆ ಪಾಲಿಸಲು ಮನವಿ:
ಕರೊನಾ ದಿನನಿತ್ಯ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ಪಾಲಿಸಬೇಕು, ಆರೋಗ್ಯ ಕಾರ್ಯಕರ್ತರು ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾವೈದ್ಯಾಧಿಕಾರಿ ತಿಳಿಸಿದರು. ವಿದೇಶಗಳಿಂದ ಊರಿಗೆ ಮರಳುವವರು ಮತ್ತು ಅವರೊಂದಿಗೆ ಸಂಪರ್ಕ ಇರಿಸುವವರು ಕಡ್ಡಾಯವಾಗಿಮನೆಗಳಲ್ಲಿ ನಿಗಾದಲ್ಲಿ ಇರಬೇಕು, ಕರೋನಾ ನಿಯಂತ್ರಣ ಕೊಠಡಿಯನ್ನು ಸಪರ್ಕಿಸಬೇಕು. ಕರೊನಾ ವೈರಸ್‍ಸಾಮಾಜಿಕವಾಗಿ ಹರಡುವ ನಿಟ್ಟಿನಲ್ಲಿ ಜನಸಂಪರ್ಕ ನಡೆಸಕೂಡದು ಎಂದವರು ತಿಳಿಸಿದ್ದಾರೆ.
5 ಹೆಲ್ಪ್ ಲೈನ್ ನಂಬ್ರಗಳು:
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 5 ಹೆಲ್ಪ್ ಲೈನ್ ನಂಬ್ರಗಳು 24 ತಾಸು ಚಟುವಟಿಕೆ ನಡೆಸಲಿವೆ. ಕರೊನಾ ಸೋಂಕು ಸಂಬಂಧ ಎಲ್ಲ ಸಹಾಯಗಳಿಗೆ ಹೆಲ್ಪ್ ಡೆಸ್ಕ್ ಸಂಪರ್ಕಿಸಬಹುದು. ರೋಗಬಾಧೆಯ ಶಂಕೆಯಿದ್ದಲ್ಲಿ ಆಸ್ಪತ್ರೆಗೆ ನೇರವಾಗಿ ಭೇಟಿ ನೀಡುವ ಬದಲು ಸಹಾಯ ಕೇಂದ್ರಕ್ಕೆ ಕರೆಮಾಡಿ ಸಲಹೆ ಪಡೆಯಬಹುದು. ದೂರವಾಣಿ ನಂಬ್ರ:04672209901, 04672209902, 04672209903, 04672209904,04672209906.762 ಮಂದಿ ನಿಗಾದಲ್ಲಿದ್ದಾರೆ.
ಆಸ್ಪತ್ರೆಗಳಲ್ಲಿ 41 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 14 ಪೆÇಸೆಟಿವ್ ಕೇಸುಗಳು ಇವೆ. ಭಾನುವಾರ ನೂತನವಾಗಿ 5ಕೇಸುಗಳು ಪೆÇಸೆಟಿವ್ ಆಗಿವೆ.ಜಿಲ್ಲಾಡಳಿತೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಐಸೊಲೇಷನ್ ಸೌಲಭ್ಯ ಏರ್ಪಡಿಸಲಾಗಿದೆ. ಪೆರಿಯ,ಪೂಡಂಗಲ್ಲು ಪ್ರದೇಶಗಳಲ್ಲಿ ಐಸೊಲೇಷನ್ ಸೆಂಟರ್ ಆರಂಭಿಸಲಾಗಿದೆ. ಕೇರ್ವೆಲ್ ಆಸ್ಪತ್ರೆ, ಜನರಲ್ ಆಸ್ಪತ್ರೆ ಗಳಲ್ಲಿಐಸೊಲೇಷನ್ ಸೌಲಭ್ಯ ಏರ್ಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ಸೌಲಭ್ಯ ವಿಸ್ತರಣೆಗೊಳಿಸಲಾಗಿದೆ.


