HEALTH TIPS

ಕಾಸರಗೋಡು, ಕೋಯಿಕ್ಕೋಡಿನಲ್ಲಿ ನಿಷೇಧಾಜ್ಞೆ-ಕರೊನಾ ವ್ಯಾಪಿಸುವುದು ತಡೆಗಟ್ಟಲು ಕ್ರಮ

   
        ಕಾಸರಗೋಡು: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಸರ್ಕಾರ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಬಗ್ಗೆ ಭಾನುವಾರದಿಂದಲೇ ಆದೇಶ ಜಾರಿಗೆ ಬಂದಿದೆ. ಆಹಾರವಸ್ತು ಹಾಗೂ ಔಷಧ ಅಂಗಡಿಗಳು ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಕಾರ್ಯಾಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಆದೇಶ ಹೊರಡಿಸಿದ್ದಾರೆ.ಜಿಲ್ಲೆಯ 17 ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲೂ ಎಲ್ಲ ಗೃಹ,ಸಾರ್ವಜನಿಕ ಸಂಚಾರ ಸೌಲಭ್ಯಗಳೂ, ಅನಿವಾರ್ಯ ಸಾಮಾಗ್ರಿಗಳಲ್ಲದೇ ಇರುವ ಎಲ್ಲ ವ್ಯಾಪಾರ ಸಂಸ್ಥೆಗಳು, ಕ್ಷೌರದಂಗಡಿಗಳು,ಬ್ಯೂಟಿ ಪಾರ್ಲರ್ ಗಳು,ಸಾರ್ವಜನಕ ಕೇಂದ್ರಗಳಲ್ಲಿ ಗುಂಪು ಸೇರುವುದು, ಅನಾವಶ್ಯಕ ಅಲೆದಾಟ, ಎಲ್ಲ ಆರಾಧನಾಲಯ, ಧಾರ್ಮಿಕ ಸಂಸ್ಥೆಗಳು, ಕ್ಲಬ್ ಗಳು, ಚಲನಚಿತ್ರ ಮಂದಿರಗಳು, ಉದ್ಯಾನಗಳು, ಸಹಿತ ಮನರಂಜನೆ ಕೇಂದ್ರಗಳು ಮುಂದಿನ ಆದೇಶ ಪ್ರಕಟಗೊಳ್ಳುವ ತನಕ ಮುಚ್ಚುಗಡೆಯಲ್ಲಿರಲಿದೆ. ಆದರೆ ಸರ್ಕಾರ ನೀಡಿರುವ ಆದೇಶಪ್ರಕಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಾಲಿನ ಬೂತ್‍ಗಳು ಪಡಿತರ ಅಂಗಡಿಗಳು, ಪೆಟ್ರೋಲ್ ಬಂಕ್,  ಮೆಡಿಕಲ್‍ಸ್ಟೋರ್, ಆಹಾರ ಖಾದ್ಯಗಳು ಲಭಿಸುವ ವ್ಯಾಪಾರ ಸಂಸ್ಥೆಗಳು ಇತ್ಯಾದಿ ಚಟುವಟಿಕೆ ನಡೆಸಬಹುದಾಗಿದೆ. ಆದರೆ ಅಂಥಾ ಅಂಗಡಿಗಳಲ್ಲಿ ಜನ ಕನಿಷ್ಠ ಒಂದೂವರೆ ಮೀ ಅಂತರ ಪಾಲಿಸಬೇಕು. ಸಾನಿಟೈಸರ್, ಮಾಸ್ಕ್ ಇತ್ಯಾದಿ ಬಳಸಿ ನಂತರವಷ್ಟೇ ಅಂಗಡಿಗಳ ಪ್ರವೇಶ ನಡೆಸಬೇಕು. ಈ ನಿಟ್ಟಿನಲ್ಲಿ ಪೆÇಲೀಸರು ಖಚಿತಪಡಿಸಿಕೊಳ್ಳಲಿದ್ದಾರೆ. ಇದರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪು ಸೇರುವುದು, ಅನಾವಶ್ಯಕ ಅಲೆದಾಟ ನಡೆಸಕೂಡದು ಎಂಬ ಆದೇಶ ನೌಕರಿ ಖಾತರಿ ಯೋಜನೆ ಕಾರ್ಮಿಕರಿಗೆ, ಸರಕಾರನಿಯೋಜಿಸಿರುವ ಸ್ವಯಂ ಸೇವಾ ಕಾರ್ಯಕರ್ತರಿಗೆ, ಜನಜಾಗೃತಿಕಾರ್ಯಕರ್ತರಿಗೆ, ವಾರ್ಡ್ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ, ಮೊಬೈಲ್ ಫೆÇೀನ್ ಸೇವೆ ಖಚಿತಪಡಿಸಲು ನೇಮಕಗೊಂಡವರಿಗೆ ಅನ್ವಯವಾಗುವುದಿಲ್ಲ. ಇವರ ಗುರುತುಚೀಟಿ ಪರಿಶೀಲಿಸಿ\ಪೆÇಲೀಸರು ಈ ಸಂಬಂಧ ಖಚಿತಪಡಿಸಿಕೊಳ್ಳಬೇಕು.
       ಜನರು ಗುಂಪುಗೂಡುವ ಸಾರ್ವಜನಿಕ ಸಮಾರಂಭ, ಪರೀಕ್ಷೆ, ಮತೀಯ ಕಾರ್ಯಕ್ರಮ, ಆಸ್ಪತ್ರೆ ಸಂದರ್ಶನ, ಮುಂತಾದ ಕಾಯಕ್ರಮಗಳಿಗೆ ನಿಯಂತ್ರಣ ಹೇರಲಾಗುವುದು. ಪ್ರತಿಭಟನಾ ಮೆರವಣಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಲ್ಲದೆ ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟಲಿರುವ ನಿಯಂತ್ರಣ ಮತ್ತಷ್ಟು ಬಿಗುಗೊಳಿಸಲಾಗಿದೆ. ರೆಸ್ಟಾರೆಂಟ್, ಶಾಪಿಂಗ್ ಮಾಲ್, ಹೋಟೆಲ್, ಸೂಪರ್‍ಮಾರ್ಕೆಟ್‍ಗಳ ಕಾರ್ಯಾಚರಣೆಗೆ ನಿಯಂತ್ರಣ ಹೇರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries