ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಜನತಾ ಕಪ್ರ್ಯೂ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಕೋರಿಕೆಯಂತೆ ನಮ್ಮ ನಾಡ ರಕ್ಷಣೆಗಾಗಿ, ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೇ ಕರೊನಾ ಮಹಾ ಮಾರಿಯನ್ನು ತಡೆಯಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬ ಆರೋಗ್ಯ, ಕ್ಷೇತ್ರದ ಕಾರ್ಯಕರ್ತರಿಗೆ, ದೇಶದ ಸೈನಿಕರಿಗೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ 5 ನಿಮಿಷ ಕೈ ಚಪ್ಪಾಳೆ, ಶಂಖ ನಾದ ಮೊಳಗಿಸುವ ಕಾರ್ಯದಂಗವಾಗಿ ಮಂಜೇಶ್ವರ ಹೊಸಬೆಟ್ಟು ನಿವಾಸಿ ಕುಡಾಲ್ ಲಕ್ಷ್ಮಣ ಆಚಾರ್ಯರ ಮನೆಯವರು ಭಾನುವಾರ ಸಂಜೆ ಮನೆ ಮುಂಭಾಗದ ತುಳಸಿ ಕಟ್ಟೆಯಲ್ಲಿ ತುಳಸಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ, ಘಂಟಾ ನಿನಾದ, ಶಂಖಧ್ವನಿ ಮೊಳಗಿಸಿ, ಕೈ ಚಪ್ಪಾಳೆಯ ತಟ್ಟಿ ಅಭಿನಂದನೆ ಸಲ್ಲಿಸಿದರು. ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸಹಿತ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಘಂಟಾನಾದದ ಮೂಲಕ ಕೃತಜ್ಞತೆಯೊಂದಿಗೆ ಕುಡಾಲ್ ಲಕ್ಷ್ಮಣ ಆಚಾರ್ಯ ಕುಟುಂಬ
0
ಮಾರ್ಚ್ 22, 2020