ಕಾಸರಗೋಡು:ಕೊರೊನಾ ವೈರಸ್(ಕೋವಿಡ್-19) ವಿವಿಧ ದೇಶಗಳಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಕೋವಿಡ್-19 ರೋಗ ಪ್ರತಿರೋಧ ಸಮಿತಿ ಸಭೆ ಆಗ್ರಹಿಸಿದೆ. ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆವಹಿಸಿದ್ದರು.
ರೋಗ ಲಕ್ಷಣ ಪ್ರಕಟಗೊಂಡವರ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ಪಂಚಾಯಿತಿ- ನಗರಸಭೆಗಳ ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ಈ ಸಮಿತಿಗಳಲ್ಲಿ ಕುಟುಂಬಶ್ರೀ ಸದಸ್ಯರನ್ನು, ಆಶಾ ಕಾರ್ಯಕರ್ತೆಯರನ್ನು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು. ಈ ಸಮಿತಿಗಳ ಏಕೀಕರಣದ ಹೊಣೆ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗಿದೆ ಎಂದವರು ತಿಳಿಸಿದರು.
ಶಿಕ್ಷಣಾಲಯಗಳಿಂದ ಅಧ್ಯಯನ ಪ್ರವಾಸಕ್ಕೆ ತೆರಳುವುದಕ್ಕೆ ಕಠಿಣ ನಿಯಂತ್ರಣ ಹೇರಲಾಗಿದೆ. ಕರೊನಾ ಬಾಧಿತ ದೇಶಗಳಿಂದ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ವಿದೇಶೀಯರ ಬಗ್ಗೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದರು. ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಪೆÇಲೀಸರ ನೇತೃತ್ವದಲ್ಲಿ ತಪಾಸಣೆ ನಡೆಯುವುದು. ವಿದೇಶೀಯರು ಸ್ವಯಂ ತಪಾಸಣೆಗೆ ಒಳಗಾಗಬೇಕು. ಕೆಮ್ಮು, ಸೀನು, ಜ್ವರದ ಲಕ್ಷಣಗಳಿದ್ದಲ್ಲಿ ತಕ್ಷಣ ಜಿಲ್ಲಾ ಆಸ್ಪತ್ರೆಯ ಕೊರೋನಾ ನಿಯಂತ್ರಣ ಘಟಕವನ್ನು (ದೂರವಾಣಿ ಸಂಖ್ಯೆ: 9946000493.)ಸಂಪರ್ಕಿಸಬೇಕು. ಕೊರೋನಾ ರೋಗ ಚಟುವಟಿಕೆಗಳ ಅಂಗವಾಗಿ ಎಲ್ಲ ಇಲಾಖೆಗಳೂ ಹೆಚ್ಚುವರಿ ಜಾಗರೂಕತೆ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಎಚ್1,ಎನ್1, ಡೆಂಗೆ, ಹಳದಿಜ್ವರ ಸಹಿತ ಅಂಟುರೋಗಗಳು ಹೆಚ್ಚಾಗಿ ವರದಿಯಾಗುತ್ತಿರುವಹಿನ್ನೆಲೆಯಲ್ಲಿ ವ್ಯಕ್ತಿಗತ ಶುಚಿತ್ವ ಮತ್ತು ಪರಿಸರ ಶುಚೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಆಗ್ರಹಿಸಿದರು. ಸಭೆಯಲ್ಲಿ ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಡಾ.ಎ.ಟಿ.ಮನೋಜ್, ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ವಿ. ಪ್ರಕಾಶ್, ಕಾಸರಗೋಡು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಂ, ಜಿಲ್ಲಾ ಹೋಮಿಯೋ ಪ್ರಧಾನ ವೈದ್ಯಾಧಿಕಾರಿ ಡಾ.ಟಿ.ಕೆ.ವಿಜಯಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಅಧಿಕಾರಿ ಡಾ.ಟಿ.ಪಿ.ಆಮಿನಾ, ಡಿ.ವೈ.ಎಸ್.ಪಿ.ಹರಿಶ್ಚಂದ್ರ ನಾಯ್ಕ್, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಷೈಲಾ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್.ಬೈಜು ಉಪಸ್ಥಿತರಿದ್ದರು.
ಮುಂಜಾಗ್ರತೆ ಅಗತ್ಯ:
ವಿವಿಧ ದೇಶಗಳಲ್ಲಿ ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸಾಬೂನು ಬಳಸಿ ಸತತ 20 ನಿಮಿಷಗಳ ಕಾಲ ಕೈತೊಳೆಯುವುದು ಕರೊನಾ ರೋಗ ಪ್ರತಿರೋಧಕ್ಕೆ ಪೂರಕವಾಗಿರುತ್ತದೆ. ಕರೊನಾ ಬಾಧಿತರ ಸಹಿತ ಮಂದಿಯಿಂದ ಸಾಕಷ್ಟು ಅಂತರ ಕಾಯ್ದಿಟ್ಟುಕೊಳ್ಳಬೇಕು. ರೋಗಬಾಧೆಯಿರುವಸಂಶಯವಿದ್ದವರು ಸಾರ್ವನಿಕ ಸಮಾರಂಭಗಳಿಂದ ದೂರಉಳಿಯಬೇಕು. ಮನೆಗಳಲ್ಲಿ ನಿಗಾದಲ್ಲಿರುವವರು ಉತ್ತಮ ಬೆಳಕು, ಗಾಳಿಯಿರುವ ಕೋಣೆಗಳಲ್ಲಿ ವಾಸಿಸಬೇಕು. ರೋಗಿಗಳೊಂದಿಗೆ ವ್ಯವಹರಿಸುವವರು ವೈಜ್ಞಾನಿಕ ರೀತಿಯಪ್ರತಿರೋಧಮಾರ್ಗಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.




