ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಂ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಕರ್ನಾಟಕ ಬ್ಯಾಂಕ್ ನೀಡಿದ ಬಸ್ ನ ಕೀಲಿಕೈಯನ್ನು ಬ್ಯಾಂಕಿನ ಆಡಳಿತ ನಿರ್ದೇಶಕ (ಸಿಇಒ) ಶ್ರೀ ಮಹಾಬಲೇಶ್ವರ ಎಂ.ಎಸ್. ರವರು ಟ್ರಸ್ಟ್ ನ ವಿಶ್ವಸ್ಥ ಮೋನಪ್ಪ ಭಂಡಾರಿಯವರಿಗೆ ಇತ್ತೀಚೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿಶ್ವಸ್ಥರಾದ ಮೋಹನದಾಸ್ ಕೊಂಡೆವೂರು, ಶಶಿಧರ ಶೆಟ್ಟಿ ಗ್ರಾಮಚಾವಡಿ, ಶ್ರೀಧರ್ ಉಪ್ಪಳ, ಕರ್ನಾಟಕ ಬ್ಯಾಂಕಿನ ಮುಖ್ಯ ನಿರ್ವಹಣಾಧಿಕಾರಿ ಬಾಲಚಂದ್ರ ವೈ.ವಿ., ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ್ ಪೈ, ಮುಖ್ಯ ಪ್ರಬಂಧಕ ಚಂದ್ರಶೇಖರ ರಾವ್ ಬಿ. ಮತ್ತು ಸಹ ಮುಖ್ಯ ಪ್ರಬಂಧಕ ಶ್ರೀನಿವಾಸ್ ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾಪೀಠದ ಸ್ಥಾಪಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಈ ಸಂಸ್ಥೆಯು ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ ಎಂದು ಆರಾಧ್ಯ ದೇವರಲ್ಲಿ ಸಂಪ್ರಾರ್ಥಿಸಿದ್ದಾರಲ್ಲದೇ, ಸಾಮಾಜಿಕ ಕಳಕಳಿಯುಳ್ಳ ಈ ಸಂಸ್ಥೆಯನ್ನು ಸಮಾಜ ಇನ್ನಷ್ಟು ಬೆಂಬಲಿಸಬೇಕೆಂದು ಶ್ರೀಗಳವರು ಕರೆನೀಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಹಾರೈಸಿದರು.


