ವರ್ತಮಾನ ತೀವ್ರ ಕಳಕಳಿಯ ಮಾನವೀಯ ಸೆಳೆತದಲ್ಲಿ ಬಂಧಿಯಾಗಿದೆ. ಕಾರಣ ಜಗತ್ತನ್ನೇ ಕಂಗಾಲುಗೊಳಿಸಿರುವ ಕೊವಿಡ್-ಕರೊನಾ-19 ವೈರಸ್ ನ ಪ್ರಭಾವದಿಂದ ಲಕ್ಷ-ಕೋಟಿ ಸಂಖ್ಯೆಯ ಜನ ಈಗಾಗಲೇ ಜೀವ ಕಳಕೊಂಡಿದ್ದು, ಅದೆಷ್ಟೋ ಜನರು ಸಾವಿನ ಭೀತಿ ಎದುರಿಸುತ್ತಿದ್ದಾರೆ.ಬಹುಷಃ 21ನೇ ಶತಮಾನ ಎಂದಿಗೂ ಗ್ರಹಿಸದ ಜಾಗತಿಕ ಸಂಕ್ರಮಣವೊಂದು ಸಂಭವಿಸುತ್ತಿದೆ.
ಈ ಮಧ್ಯೆ ಇಂದು ಭಯದ ವಿಕಾರಿ ಸಂವತ್ಸರ ಕಳೆದು ಶಾರ್ವರಿ ಸಂವತ್ಸರ ಆರಂಭದ ಯುಗಾದಿಯ ಪರ್ವ ಕಾಲ. ಆದರೆ ವ್ಯಾಪಕ ವೈರಸ್ ಭೀತಿಯ ಕಾರಣ ಭಾರತ ಸಹಿತ ಜಗತ್ತು ಇಂದು ಯಾವ ಹಬ್ಬಾಚರಣೆಯ ಸ್ಥಿತಿಯಲ್ಲೂ ಇಲ್ಲದಿರುವುದು ನಿರಾಕರಿಸುವಂತದ್ದಲ್ಲ. ಆದರೆ ಭರವಸೆ ಯಾವತ್ತಿಗೂ ಭವಿಷ್ಯದ ಅಡಿಪಾಯ. ಈ ಹಿನ್ನೆಲೆಯಲ್ಲಿ ಕವಿದಿರುವ ಕಾರ್ಮೋಡ ಸರಿದು ನವೀನ ಭವಿಷ್ಯವ ಎದುರುಗೊಳ್ಳುವ, ಧನಾತ್ಮಕ ಶಕ್ತಿ ಸಂಚಯನದ ಮೂಲಕ ಮಹಾಮಾರಿಯು ಕಳೆದು ಸರ್ವರಿಗೂ ಒಳಿತನ್ನು ಉಂಟುಮಾಡಲಿ ಎಂಬ ಹಾರೈಕೆಗಳೊಂದಿಗೆ ಶಾರ್ವರಿ ನಾಮ ಸಂವತ್ಸರದ ಶುಭಾಶಯಗಳು.
ಸಂಪಾದಕಿ


