HEALTH TIPS

ಕಿದೂರು ಶಾಲಾ ವಾರ್ಷಿಕೋತ್ಸವ-ಸನ್ಮಾನ ಸಮಾರಂಭ


         ಕುಂಬಳೆ: ಕಿದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ನಡೆಯಿತು.
        ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಸುಖೇಶ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಉದ್ಘಾಟಿಸಿದರು. ಶಾಲಾಭಿವೃದ್ದಿಯಲ್ಲಿ ಹೆತ್ತವರ ಹಾಗೂ ಊರ ನಾಗರಿಕರ ಪಾತ್ರ ಮಹತ್ತರವಾದುದು. ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಮದು ಅವರು ಈ ಸಂದರ್ಭ ತಿಳಿಸಿದರು. ಶಾಲಾ ಪ್ರಾಥಮಿಕ ಸೌಕರ್ಯಗಳಿಗೆ 2020-21ನೇ ಸಾಲಿನಲ್ಲಿ ಗ್ರಾ.ಪಂ. ನಿಂದ 10 ಲಕ್ಷ ರೂ.ಗಳ ನಿಧಿ ಮೀಸಲಿರಿಸಲಾಗುವುದೆಂದು ಅವರು ಈ ಸಂದರ್ಭ ಭರವಸೆ ನೀಡಿದರು.
         ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಖೇಶ್ ಭಂಡಾರಿ ಅವರು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಹಿರಿಮೆಯ ಕೇಂದ್ರಗಳಾಗಿ ಬದಲಾಗುತ್ತಿದ್ದು ಗುಣಮಟ್ಟದ ಶಿಕ್ಷಣಕ್ಕಾಗಿ ಹೆತ್ತವರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆತರಬೇಕೆಂದು ತಿಳಿಸಿದರು.
      ಶಾಲೆಯಲ್ಲಿ 21 ವರ್ಷಗಳ ಸುಧೀರ್ಘ ಅವಧಿ ಶಿಕ್ಷಕರಾಗಿದ್ದು ಮುಖ್ಯೋಪಾಧ್ಯಾಯರಾಗಿ ಭಡ್ತಿಹೊಂದಿದ ರಾಮು ಯು. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಪಿ. ಸ್ಮರಣಿಕೆಯಿತ್ತು, ಶಾಲುಹೊದೆಸಿ ಗೌರವಿಸಿದರು. ಶಾಲಾ ಮಾತೃಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಮಹಾದೇವ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ಮಹಾದೇವ ಕೃಪಾಪೋಶಿತ ಯಕ್ಷಗಾನ ಮಂಡಳಿ ವತಿಯಿಂದ ರಾಮು ಯು. ಅವರನ್ನು ಗೌರವಿಸಲಾಯಿತು.
       ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. ರಾಜೀವ್ ರಾವ್, ಕೇಶವ ಮಾಸ್ತರ್, ನಿವೃತ್ತ ಸೈನಿಕ, ಶಿಕ್ಷಕ ಯು.ಎಂ.ಮೂಲ್ಯ, ಭಾರತಿ ಟೀಚರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಕುಮಾರ್ ಜಿ., ಮಾತೃಮಂಡಳಿ ಅಧ್ಯಕ್ಷೆ ಸರೋಜಿನಿ ಕೆ.ಎಸ್., ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ವಸಂತ ಎಂ.ಸ್ವಾಗತಿಸಿ,ಜಯಶ್ರೀ ಬಿ.ವಂದಿಸಿದರು. ಮುಖ್ಯೋಪಾಧ್ಯಾಯ ರಾಮು ಯು ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಜಯಶ್ರೀ ಬಿ. ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿಯರಾದ ಪ್ರಜ್ಞಾ, ಧನ್ಯ, ಸಿಬ್ಬಂದಿ ಪುಷ್ಪರಾಜ್ ಸಹಕರಿಸಿದರು.
       ವಾರ್ಷಿಕೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ, ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಹಳೆ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries