ಉಪ್ಪಳ: ಪೈವಳಿಕೆ ಸಮೀಪದ ಕೀರ್ತಿಶೇಷ ಅಂಬಿಕಾನ ಶ್ರೀ ದಾಮೋದರ ಆಚಾರ್ಯ ಸ್ಮರಣಾರ್ಥ ಸಾಮೂಹಿಕ ಬ್ರಹ್ಮೋಪದೇಶ ಹಾಗೂ ವಿಶ್ವಕರ್ಮ ಯಜ್ಞ ಕಯ್ಯಾರಿನ ವಿಶ್ವ ಬ್ರಾಹ್ಮಣ ಸಮಾಜ ಭವನದಲ್ಲಿ ಜರಗಿತು.
ಈ ಪುಣ್ಯ ಕಾರ್ಯಕ್ರಮಕ್ಕೆ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠ ಕಟಪಾಡಿಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಮಹಾಸ್ವಾಮಿಗಳು ಹಾಗೂ ಅರೆಮಾದನಹಳ್ಳಿ ಶಿವ ಸುಜ್ಞಾನ ಪೀಠದ ಶ್ರೀ ಶ್ರೀ ಶ್ರೀ ಶಿವ ಸುಜ್ಜಾನ ತೀರ್ಥ ಮಹಾಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೋಕ್ತೇಸರ ಕೆ.ಕೇಶವ ಆಚಾರ್ಯ ಉಪಸ್ಥಿತರಿದ್ದರು. ಪೈವಳಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅಚ್ಚುತ್ತ ಚೇವಾರು ದಿ.ಅಂಬಿಕಾನ ದಾಮೋದರ ಆಚಾರ್ಯರ ಸಂಸ್ಮರಣೆ ಮಾಡಿದರು. ಪತ್ರಕರ್ತ ಜಯ ಮಣಿಯಂಪಾರೆ ಸಭಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉದಯೋನ್ಮುಖ ಗಾಯಕರಾದ ವಿಘ್ನೇಶ ಆಚಾರ್ಯ,ಪ್ರಕಾಶ್ ಆಚಾರ್ಯ ಚಿಪ್ಪಾರು ಅವರಿಂದ. ಭಕ್ತಿ-ಭಾವ ಗಾಯನ ಜರಗಿತು.


