ಬದಿಯಡ್ಕ: ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕಾರ್ಯಕರ್ತ ಮುನ್ನುಗ್ಗಿದ್ದಾಗ ಸಂಘಟನೆ ಬೆಳೆಯುತ್ತದೆ. ಭಾರತೀಯ ಜನತಾಪಕ್ಷವು ಯಂಗ್ ಬಿಜೆಪಿ ಆಗಬೇಕಿದೆ. ಯುವಕರನ್ನು ಜೋಡಿಸಿಕೊಳ್ಳುವುದರಿಂದ ಪಕ್ಷವು ಬಲಿಷ್ಠವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಭಾರತೀಯ ಜನತಾ ಪಕ್ಷವು ಇತರ ಪಕ್ಷಕ್ಕಿಂತ ಭಿನ್ನ ಎಂಬುದನ್ನು ದೇಶವ್ಯಾಪಿಯಾಗಿ ತೋರಿಸಿಕೊಟ್ಟಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಬದಿಯಡ್ಕ ಶ್ರೀ ಗುರುಸದನದಲ್ಲಿ ಭಾನುವಾರ ಕಾಸರಗೋಡು ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪವಿತ್ರವಾದ ದೇಶದ ಸಂವಿಧಾನದ ಹಾಗೆ ಭಾರತೀಯ ಜನತಾ ಪಕ್ಷಕ್ಕೂ ಒಂದು ಸಂವಿಧಾನವಿದೆ. ಆ ಸಂವಿಧಾನದ ಅಡಿಯಲ್ಲಿ ನಮ್ಮ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುತ್ತಿದೆ. ಇಂದಿನ ಕಾಲವು ಬಿಜೆಪಿಯ ಸುವರ್ಣಯುಗವಾಗಿದೆ. ಇಂದು ನಾವು ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಇನ್ನು ಅದನ್ನು ಉಳಿಸಿಕೊಳ್ಳಬೇಕಿದೆ. ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರವನ್ನು ನಾವು ಕಾಣಲಿದ್ದೇವೆ. ಎಲ್ಲರಿಗೂ ಒಂದೇ ಕಾನೂನು ಎಂಬ ಸಮಾನ ನಾಗರಿಕ ಸಂಹಿತೆ ಜ್ಯಾರಿಗೊಳ್ಳಲಿದೆ. ಇಂತಹ ಕಾಲಘಟ್ಟದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾದರೆ ಜನರು ನಮ್ಮನ್ನು ಸ್ವೀಕರಿಸುತ್ತಾರೆ. ಪಕ್ಷದ ಬದ್ಧತೆಯನ್ನು ಕಾಯ್ದುಕೊಂಡು, ವಿಚಾರವನ್ನು ತಳಮಟ್ಟಕ್ಕೆ ಮುಟ್ಟಿಸುವ ಕಾರ್ಯಕರ್ತನನ್ನು ಗುರುತಿಸಿ ಪಕ್ಷವು ಸ್ಥಾನಮಾನವನ್ನು ನೀಡುತ್ತದೆ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಪ್ರ.ಕಾರ್ಯದರ್ಶಿ ಎಂ. ಸುಧಾಮ ಗೋಸಾಡ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಷ್ಟ್ರೀಯ ಕೌನ್ಸಿಲ್ ಸದಸ್ಯೆ ಪ್ರಮೀಳಾ ಸಿ.ನಾಯ್ಕ್, ಜಿಲ್ಲಾ ಪ್ರ.ಕಾರ್ಯದರ್ಶಿ ವೇಲಾಯುಧನ್, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಶಿವಕೃಷ್ಣ ಭಟ್, ನೇತಾರರಾದ ಮಾಲತಿ ಸುರೇಶ್, ಎಸ್. ಕುಮಾರ್, ಸಂಪತ್, ಈಶ್ವರ ಮಾಸ್ತರ್ ಪೆರಡಾಲ, ಧನಂಜಯ ಮಧೂರು, ಎಂ.ಪಿ.ರಾಮಪ್ಪ ಮಂಜೇಶ್ವರ, ನ್ಯಾಯವಾದಿ ಸದಾನಂದ ರೈ, ಎನ್.ಸತೀಶ್, ಅವಿನ್ ಎಸ್.ವಿ., ರವೀಂದ್ರ ರೈ, ರಜನಿ ಸಂದೀಪ್ ಪುದುಕೋಳಿ, ಸಂದೀಪ್ ಮನ್ನಿಪ್ಪಾಡಿ, ರತ್ನಾವತಿ ಪಾಲ್ಗೊಂಡಿದ್ದರು.
ನೂತನ ಮಂಡಲ ಅಧ್ಯಕ್ಷರಾದ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ.ಆರ್., ಸುಕುಮಾರ ಕುದ್ರೆಪ್ಪಾಡಿ, ಉಪಾಧ್ಯಕ್ಷರುಗಳಾದ ಹರ್ಷವರ್ಧನ ನಾಯಕ್, ಶ್ರೀಧರ ಬೆಳ್ಳೂರು, ರತ್ನಾವತಿ, ರವೀಂದ್ರ ಪೂಜಾರಿ ಕರಂದಕ್ಕಾಡು, ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಮುಂಡೋಳುಮೂಲೆ, ಹರೀಶ್ ಗೋಸಾಡ, ಅನಿತ ಲೀಲಕೃಷ್ಣನ್, ಉಮಾ ಕಡಪ್ಪುರ, ಸತ್ಯವತಿ ಹಾಗೂ ಖಜಾಂಜಿ ಅರುಣ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಪ್ರ.ಕಾರ್ಯದರ್ಶಿಗಳಾದ ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಸುನಿಲ್ ಪಿ.ಆರ್. ವಂದಿಸಿದರು.

