ಮಧೂರು: ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯ ಹಾಗು ಆಸ್ಪತ್ರೆಯ, ಅಂತಾರಾಷ್ಟ್ರೀಯ ಕ್ಲಿನಿಕಲ್ ನಸಿರ್ಂಗ್ ನ ಪ್ರಾಧ್ಯಾಪಕಿ ಪೆÇ್ರಫೆಸರ್ ಕ್ರಿಸ್ಟಿನ್ ಮಾಫ್‍ಅಟ್ಟ್ ಅವರು ವಿಶ್ವ ಲಿಂಫೆÇಡೆಮಾ ದಿನದಂದು(ಮಾ.6) ಕಾಸರಗೋಡು ಉಳಿಯತ್ತಡ್ಕದ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡೆರ್ಮಟೋಲೊಜಿ (ಐ ಎ ಡಿ )ಗೆ ಭೇಟಿ ನೀಡಿ ಅಲ್ಲಿ ನಡೆಯುತಿರುವ ವೈದ್ಯಕೀಯ ಶಿಬಿರ ಹಾಗು ರಿಸರ್ಚ್ ಅಂಡ್ ಕಾಲಬೋರೇಷನ್ ಎಂಬ ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡರು.
ಪೆÇ್ರಫೆಸರ್ ಮಾಫ್‍ಅಟ್ಟ್ ಅವರು ಕ್ವೀನ್ ಎಲಿಝಬೆತ್ 2006 ರ ಜನವರಿ 11 ರ, ಹೊಸ ವರ್ಷದ ಗೌರವ ಪಟ್ಟಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ನಿರ್ದೇಶಿತ ಕಮ್ಯಾಂಡರ್ ಆಗಿದ್ದರು. ಅಲ್ಲದೆ ಇವರು ಲಂಡನ್ ಇಂಟನ್ರ್ಯಾಷನಲ್ ಲಿಂಫೆÇಡೆಮಾ ಫ್ರೇಮ್ವರ್ಕ್ ಸ್ಥಾಪಕರಾಗಿದ್ದಾರೆ. ಇವರೊಂದಿಗೆ ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ ಸಹಿತ ವೈದ್ಯಕೀಯ ತಂಡ ವಿಸ್ಕøತ ಚರ್ಚೆ ಹಾಗೂ ವೈದ್ಯಕೀಯ ಪರಿಶೋಧನೆಯಲ್ಲಿ ಭಾಗವಹಿಸಿದ್ದರು.
ವಿಶ್ವ ಲಿಂಫೆÇಡೆಮಾ ದಿನದ ಅಂಗವಾಗಿ ದುಗ್ದರಸ ಫಿಲೇರಿಯಾಸಿಸ್ ಬಾಧಿಸಿರುವ ರೋಗಿಗಳಿಗಾಗಿ 5 ದಿನಗಳ ಶಿಬಿರವನ್ನು ಐಎಡಿ ಆಯೋಜಿಸಿದೆ.


