ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಾರ್ಷಿಕ ದಿನಾಚರಣೆಯು ಮಾರ್ಚ್ 12ರಂದು ಗುರುವಾರ ವಿವಿಧ ವೈದಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸಮಾರಂಭದ ಅಂಗವಾಗಿ ಸಾರ್ವಜನಿಕ ಶತರುದ್ರಾಭಿಷೇಕ, ಬಲಿವಾಡುಕೂಟ ಹಾಗೂ ರಾತ್ರಿ ಶ್ರೀ ಸತ್ಯನಾರಾಯಣ ದೇವರಪೂಜೆ ಜರಗಲಿರುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ಗಂಟೆ 2ರಿಂದ ಜಯರಾಮ ಭಟ್ ದೇವಸ್ಯ ಅವರ ಸಂಯೋಜನೆ ಹಾಗೂ ಸಹಕಾರದಲ್ಲಿ ಯಕ್ಷಗಾನ ತಾಳಮದ್ದಳೆ ಶರಸೇತು ಬಂಧ ಜರಗಲಿದೆ. ಹಿಮ್ಮೇಳದಲ್ಲಿ ರವಿಶಂಕರ ಮಧೂರು, ಶಿವಶಂಕರ ಭಟ್ ತಲ್ಪನಾಜೆ, ಕೃಷ್ಣ ಭಟ್ ಅಡ್ಕ, ಕೃಷ್ಣ ಮೂರ್ತಿ ಎಡನಾಡು ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಸರ್ಪಂಗಳ ಈಶ್ವರ ಭಟ್, ಜಯರಾಮ ದೇವಸ್ಯ ಭಾಗವಹಿಸುವರು. ಸಂಜೆ 6ರಿಂದ ನೃತ್ಯ ಲಹರಿ ನಾಟ್ಯಾಲಯ ಪಜೀರು ಮಂಗಳೂರು ಇದರ ನೃತ್ಯಗುರು ವಿದುಷಿ ರೇಷ್ಮಾ ನಿರ್ಮಲ ಭಟ್ ಇವರ ಶಿಷ್ಯೆ ಕುಮಾರಿ ದೀಪಿಕಾ ಭಟ್ ಮತ್ತು ಊರ ಪ್ರತಿಭೆಗಳಿಂದ ಭರತನಾಟ್ಯ ಹಾಗೂ ನೃತ್ಯ ವೈವಿಧ್ಯ ಜರಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

