ಕಾಸರಗೋಡು: ಹಸಿರು ಕೇರಳ ಮಿಷನ್, ಸಹಕಾರಿ ಇಲಾಖೆ ಜಂಟಿ ವತಿಯಿಂದ 'ಹಸಿರು ಸಹಕಾರಿ' ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು. ಕಾಸರಗೋಡು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಸಹಕಾರಿ ಸಂಘ ರೆಜಿಸ್ತ್ರಾರ್ ಪಿ.ಕೆ.ಜಯಶ್ರೀ ಉದ್ಘಾಟಸಿದರು. ಸಹಾಯಕ ರೆಜಿಸ್ತ್ರಾರ್ ವಿ.ಮಹಮ್ಮದ್ ನೌಷಾದ್ ಅಧ್ಯಕ್ಷತೆ ವಹಿಸಿದ್ದರು.
ಹಸಿರು ಕೇರಳಂ ಮಿಷನ್ ಕನ್ಸಲ್ಟೆಂಟ್ ಸಂಜೀವ್ ಎಸ್.ಯು. ಯೋಜನೆ ಬಗ್ಗೆ ಮಾಹಿತಿ ನೀಡಿದರು. ಹಸಿರು ಕೇರಳಂ ಮಿಷನ್ ಜಿಲ್ಲಾ ಸಂಚಾಲಕಎಂ.ಪಿ.ಸುಬ್ರಹ್ಮಣ್ಯನ್ ಮುಂದಿನ ದಿನಗಳ ಚಟುವಟಿಕೆಗಳ ಮಾಹಿತಿ ನೀಡಿದರು. ಪ್ರಧಾನ ಕೃಷಿ ಅಧಿಕಾರಿ ಸಜಿನಿ ಮೋಳ್, ಜತೆ ನಿರ್ದೇಶಕಿ ಎನ್.ಜಿ.ಪ್ರೀಜಿ, ಕಾರ್ಯಕಾರಿ ಇಂಜಿನಿಯರ್ (ನೀರಾವರಿ) ರಾಜನ್ ಡಿ., ಕೇರಳ ಬ್ಯಾಂಕ್ ಕಾಸರಗೋಡು ಶಾಖೆಯ ಪ್ರಬಂಧಕ ಎ.ಅನಿಲ್ ಕುಮಾರ್, ಕೋಟಚ್ಚೇರಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ವಿಶ್ವನಾಥನ್,ನೀಲೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ರಾಧಾಕೃಷ್ಣನ್ ನಾಯರ್, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ರೆಜಿಸ್ತ್ರಾರ್ (ಪ್ಲಾನಿಂಗ್) ಕೆ.ಮುರಳೀಧರನ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ(ಕೃಷಿ) ಸುಶೀಲಾ ಬಿ. ವಂದಿಸಿದರು. ಜಿಲ್ಲೆಯ ಸಹಕಾರಿ ಸಂಘಗಳ ನೇತೃತ್ವದಲ್ಲಿ ನಡೆದ ಹಸಿರು ಚಟುವಟಿಕೆಗಳ ವೀಡಿಯೋ ಪ್ರದರ್ಶನ , ಗುಂಪು ಚರ್ಚೆ ಇತ್ಯಾದಿ ನಡೆಯಿತು.

