ಕಾಸರಗೋಡು: ಮಾರುಕಟ್ಟೆಗೆ ತಲುಪುವ ತೆಂಗಿನೆಣ್ಣೆಯಲ್ಲಿ ಕಲಬೆರಕೆ ಪತ್ತೆ ಮಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷಾ ಇಲಾಖೆ ಸಜ್ಜಾಗಿದೆ. ನಕಲಿ ಉತ್ಪನ್ನಗಳನ್ನು ಪತ್ತೆ ಮಾಡಿ ವಶಪಡಿಸುವ ನಿಟ್ಟಿನಲ್ಲಿ ಇಲಾಖೆ ಕಡ್ಡಾಯ ಆದೇಶ ಹೊರಡಿಸಿದೆ. ಎಲ್ಲ ತೆಂಗಿನೆಣ್ಣೆ ಉತ್ಪಾದಕರು, ವಿತರಕರು, ಬ್ರಾಂಡೆಡ್ ವಿಳಾಸಗಳು ಇತ್ಯಾದಿಗಳನ್ನುಆಹಾರ ಸುರಕ್ಷೆ ಸಹಾಯಕ ಕಮೀಷನರ್ ಕಾರ್ಯಾಲಯದಲ್ಲಿ ನೋಂದಣಿ ನಡೆಸಬೇಕು. ಮಾ.15ರ ಮುಂಚಿತವಾಗಿ ನೋಂದಣಿನಡೆಸಿದವರು ಮಾತ್ರ ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಾಟ ನಡೆಸಲು ಅನುಮತಿ ಇರುವುದು. ಆದೇಶ ಉಲ್ಲಂಘಿಸಿದ ಉತ್ಪನ್ನಗಳ ಸಂಬಂಧಪಟ್ಟವರಿಗೆ ನೂತನ ಪರವಾನಗಿ ನೀಡುವುದಿಲ್ಲ. ಇತರ ರಾಜ್ಯಗಳ ತೆಂಗಿನೆಣ್ಣೆ ಉತ್ಪಾದಕರಿಗೆ ಅನುಮತಿ ಇಲ್ಲದೆ ತಮ್ಮ ಉತ್ಪನ್ನ ಇಲ್ಲಿನ ಮಾರುಕಟ್ಟೆಗೆ ಇಳಿಸುವಂತಿಲ್ಲ. ಅಂಗೀಕೃತ ಬ್ರಾಂಡೆಡ್ ತೆಂಗಿನೆಣ್ಣೆಯ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಆಹಾರ ಸುರಕ್ಷಾ ಇಲಾಖೆಯ ವೆಬ್‍ಸೈಟ್ ಮೂಲಕ ಪಡೆಯಬಹುದು. ಮಾಹಿತಿಗೆ ಕಾಸರಗೋಡು ಆಹಾರಸುರಕ್ಷೆ ಸಹಾಯಕ ಕಮೀಷನರ್ ಕಾರ್ಯಾಲಯ(04994256257) ವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ತೆಂಗಿನೆಣ್ಣೆಯಲ್ಲಿ ಕಲಬೆರಕೆ-ಪತ್ತೆಗೆ ಆಹಾರ ಸುರಕ್ಷಾ ಇಲಾಖೆ ಸಜ್ಜು
0
ಮಾರ್ಚ್ 12, 2020