ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಆರಾಟು ದಿನದಂದು ನೃತ್ಯ ಶಿಕ್ಷಕ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಅವರ ಶಿಷ್ಯೆ ಶಿವಾನಿ ಕೂಡ್ಲು ಇವರಿಂದ ಪೂತನಿ ಸಂಹಾರದ ಕಥಾ ವಸ್ತುವಾಗಿದ್ದ ಮೊಹಿನಿಯಟ್ಟಂ ಜರಗಿತು.
ದೇವಸ್ಥಾನದ ರಾಜಾಂಗಣದಲ್ಲಿ ನಡೆದ ಈ ನೃತ್ಯ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನುರಂಜಿಸಿತು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ ಶಾನುಭಾಗ್ ಶಿವಾನಿ ಕೂಡ್ಲು ಅವರನ್ನು ಶಾಲುಹೊದಿಸಿ ಗೌರವಿಸಿದರು. ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ಶಿವಾನಿ ಇದೇ ಶಾಲೆಯ ಶಿಕ್ಷಕ ಕಿರಣ್ ಪ್ರಸಾದ್ ಕೂಡ್ಲು ಹಾಗೂ ಎಡನೀರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ರಮ್ಯಾ ಕೆ ಎನ್ ಇವರ ಪುತ್ರಿ.


