HEALTH TIPS

ಕರೊನಾ ಬಾಧೆ-ವಿದ್ಯಾರ್ಥಿನಿಯೊಂದಿಗೆ ಸಂಪರ್ಕ ಬೆಳೆಸಿದ ವಿದ್ಯಾರ್ಥಿಗಳ, ಅಧ್ಯಾಪಕರ ಮಾಹಿತಿ ಸಂಗ್ರಹ

 
       ಕಾಸರಗೋಡು: ಕರೊನಾ ವೈರಸ್ ಸೋಂಕು ದೃಢೀಕರಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಸಂಪರ್ಕ ಬೆಳೆಸಿದ ವಿದ್ಯಾರ್ಥಿಗಳು, ಅಧ್ಯಾಪಕರ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
     ದುಬೈಯಿಂದ ಬಂದ ತಂದೆಯಿಂದ ಈ ವಿದ್ಯಾರ್ಥಿನಿಗೆ ಕರೊನಾ ವೈರಸ್ ಸೋಂಕು ಬಾಧಿಸಿತ್ತು. ಕಾಂಞಂಗಾಡ್‍ನ ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಲಾಮಿಪಳ್ಳಿ ನಿವಾಸಿ ಕೊನೆಯ ದಿನದ ಎರಡು ಪರೀಕ್ಷೆಗಳನ್ನು ಬರೆದಿದ್ದಳು.
       ಈ ಸಂದರ್ಭದಲ್ಲಿ ಸಂಪರ್ಕ ಬೆಳೆಸಿದ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಡ್ಯೂಟಿಯಲ್ಲಿದ್ದ ಅಧ್ಯಾಪಕರ ಮಾಹಿತಿಗಳನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ. ಮಾ.18 ಮತ್ತು 19 ರ ಪರೀಕ್ಷೆಗಳನ್ನು ಈ ವಿದ್ಯಾರ್ಥಿ ಬರೆದಿದ್ದಳು. ವಿದ್ಯಾರ್ಥಿನಿಯ ತಂದೆ ಮಾ.17 ರಂದು ಸಂಜೆ 4 ಗಂಟೆಗೆ ವಿದೇಶದಿಂದ ಮನೆಗೆ ತಲುಪಿದ್ದರು. ಇವರನ್ನು ಮನೆಯಲ್ಲಿ ನಿಗಾದಲ್ಲಿರಲು ನಿರ್ದೇಶಿಸಲಾಗಿತ್ತು. ಮನೆಯಲ್ಲಿ ನಿಗಾದಲ್ಲಿರುವಂತೆ ವಿದ್ಯಾರ್ಥಿನಿಗೆ ಕೊರೊನಾ ವೈರಸ್ ಸೋಂಕು ಹರಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries