ನವದೆಹಲಿ: ನಿನ್ನೆ ಜಾರಿಗೊಳಿಸಲಾಗಿದ್ದ 14 ತಾಸುಗಳ ಜನತಾ ಕಫ್ರ್ಯೂ ಕೊರೋನಾವೈರಸ್ ವಿರುದ್ಧದ ಸಮರದ ಆರಂಭ ಮಾತ್ರ, ಯಾವುದೇ ಸವಾಲ್ ಗಳನ್ನು ಒಗ್ಗಟ್ಟಾಗಿ ಸೋಲಿಸುವುದಾಗಿ ದೇಶವಾಸಿಗಳು ಸಾಕ್ಷಿಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಜನತಾ ಕಫ್ರ್ಯೂ ರಾತ್ರಿ 9 ಗಂಟೆಗೆ ಮುಕ್ತಾಯವಾಗಲಿದೆ. ಆದರೆ, ಹಾಗೆಂದ ಮಾತ್ರ ಸಂಭ್ರಮಾಚರಣೆ ಪಡಬೇಕಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಜನತಾ ಕಫ್ರ್ಯೂವನ್ನು ಯಶಸ್ಸು ಎಂದು ಪರಿಗಣಿಸಬಾರದು, ಇದು ಧೀರ್ಘ ಕಾಲದ ಸಮರದ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ಕುರಿತು ಜನರಲ್ಲಿ ಅರಿವು ಹಾಗೂ ದೇಶವನ್ನು ಕೊರೋನಾ ವೈರಸ್ ಮುಕ್ತಗೊಳಿಸಲು ಸೇವೆ ಸಲ್ಲಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಜನತಾ ಕಫ್ರ್ಯೂವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದರು.
आज का #JantaCurfew भले ही रात 9 बजे खत्म हो जाएगा, लेकिन इसका मतलब यह नहीं है कि हम सेलिब्रेशन शुरू कर दें। इसको सफलता न मानें। यह एक लम्बी लड़ाई की शुरुआत है। आज देशवासियों ने बता दिया कि हम सक्षम हैं, निर्णय कर लें तो बड़ी से बड़ी चुनौती को एक होकर हरा सकते हैं।
40.6K people are talking about this



