HEALTH TIPS

ಕನ್ನಡ ಸಿರಿ ಸಮ್ಮೇಳನ-ಮೈಸೂರು ಪ್ರಾದೇಶಿಕ ಸಮಿತಿ ಸಭೆ


           ಕುಂಬಳೆ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರವಾದ ಭಾರತದಲ್ಲಿ ಸಾವಿರಾರು ಭಾಷೆ, ವಿವಿಧ ಧರ್ಮಗಳ ವೈವಿಧ್ಯತೆ ಇದ್ದರೂ ಭಾರತೀಯರೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸುವ ಶಕ್ತಿ ನಮ್ಮ ದೇಶದ ವಿಶೇಷತೆಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಬೆಳೆಸಿ ಕಾಪಿಡುವ ಕೆಲಸ ಸಮಸ್ತ ಕನ್ನಡಿಗರ ಸಹಭಾಗಿತ್ವದಲ್ಲಿ ಆಗಬೇಕು. ಗಡಿನಾಡು ಕಾಸರಗೋಡಿನ ಅನಂತಪುರದಲ್ಲಿ ಮೇ.1 ರಿಂದ 3ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಸಾಫಲ್ಯಗೊಳ್ಳಲಿ ಎಂದು ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಿ.ಬಿ.ನಾಯಕ ಅವರು ತಿಳಿಸಿದರು.
           ಅನಂತಪುರದಲ್ಲಿ ಮೇ.1 ರಿಂದ 3ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರು ವಿಶ್ವವಿದ್ಯಾನಿಲಯ ಮುಕ್ತ ವಿವಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕನ್ನಡ ಸಿರಿ ಸಮ್ಮೇಳನ ಮೈಸೂರು ಪ್ರಾದೇಶಿಕ ಕನ್ನಡಿಗರ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
         ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಲಹಾ ಮಂಡಳಿ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಕೆ.ಜಯಪ್ರಕಾಶ ರಾವ್, ಕೆ.ಲಕ್ಷ್ಮೀ ಮೈಸೂರು, ವೇಣುಗೋಪಾಲ ಆಚಾರ್ಯ, ರಿಜಿಸ್ಟಾರ್ ಹಾ.ಚಂದ್ರಶೇಖರ, ಸಿಂಡಿಕೇಟ್ ಸದಸ್ಯ ಡಾ.ಕೆ.ವಸಂತಕುಮಾರ್, ಅಖಿಲ ಭಾರತ ಜನಪದ ಮತ್ತು ಬುಡಕಟ್ಟು ಕಲಾಪರಿಷತ್ತು ನವದೆಹಲಿಯ ಪ್ರಧಾನ ಕಾರ್ಯದರ್ಶಿ ಹಾಸನ ರಘು, ಎಂ.ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಅಖಿಲ ಕರ್ನಾಟಕ ಜನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನದ ಪೂರ್ಣ ಮಾಹಿತಿ ನೀಡಿದರು. ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಕಾಸರಗೋಡು ಸ್ವಾಗತಿಸಿ, ವಂದಿಸಿದರು.
        ಈ ಸಂದರ್ಭ ಕನ್ನಡ ಸಿರಿ ಸಮ್ಮೇಳನ ಮೈಸೂರು ಪ್ರಾದೇಶಿಕ ಸಮಿತಿ ರಚಿಸಲಾಯಿತು. ಗೌರವ ಮಾರ್ಗದರ್ಶಕರಾಗಿ ಪ್ರೊ.ಡಿ.ಬಿ.ನಾಯಕ, ಅಧ್ಯಕ್ಷರಾಗಿ ಕೆ.ಜಯಪ್ರಕಾಶ ರಾವ್, ಉಪಾಧ್ಯಕ್ಷರಾಗಿ ಕೆ.ಲಕ್ಷ್ಮೀ ಮೈಸೂರು, ಗುರುಮೂರ್ತಿ, ಎನ್.ಭಾರಧ್ವಾಜ್,  ವೇಣುಗೋಪಾಲ, ಕಾರ್ಯದರ್ಶಿಯಾಗಿ ಡಾ.ಕೆ.ವಸಂತಕುಮಾರ್ ಹಾಗೂ ಸಂಚಾಲಕರಾಗಿ ಎಂ.ಚಂದ್ರಶೇಖರ ಮೊದಲಾದವರನ್ನು ಆಯ್ಕೆಮಾಡಲಾಯಿತು. ಶೀಘ್ರದಲ್ಲಿ ಬೃಹತ್ ಮಟ್ಟದ ಸಭೆ ನಡೆಸಿ ಸಮ್ಮೇಳನ ಯಶಸ್ವಿಗೆ ಕ್ಯಗೊಳ್ಳಬೇಕಾಗಿ ತೀರ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries