ಕುಂಬಳೆ: ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಬುಧವಾರ ಪ್ರಾತಃಕಾಲದಿಂದಲೇ ತಾಂತ್ರಿಕ-ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಕಲಾತತ್ವಾದಿ ಹೋಮಗಳು,ಗೋಪೂಜೆ,ಗೋ ಪ್ರವೇಶ,ಕವಾಟೋದ್ಘಾಟನೆ ನಡೆದು ಬಳಿಕ ಬೆಳಗ್ಗೆ 6 ಗಂಟೆಯ ಕುಂಭಲಗ್ನ ಶುಭಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಜರಗಿತು.
ವಿವಿಧೆಡೆಯ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಗಂಟೆ 12.30ಕ್ಕೆ ವಿಶೇಷ ಅಲಂಕಾರ ಪೂಜೆ, ಶ್ರೀ ದೇವರ ಬಿಂಬ ಬಲಿ,ಪ್ರಸಾದ,ಸಂಜೆ 6.30ಕ್ಕೆ ದೀಪರಾಧನೆ,ತಾಯಂಬಕ,ಸೋಪನ ಸಂಗೀತ ಸಾಕ್ಸೋಫೆÇೀನ್ ವಾದನ,ರಾತ್ರೆ ಗಂಟೆ 8ರಿಂದ ಶ್ರೀ ದೇವರಮಹಾಪೂಜೆ,ಭೂತಬಲಿ,ವಸಂತ ಮಂಟಪದಲ್ಲಿ ಅಷ್ಟಾವಧಾನ ಸಹಿತ ಪೂಜೆ,ರಾಜಾಂಗಣ ಪ್ರಸಾದ,ಶ್ರೀ ದೇವರ ಆಲಯ ಪ್ರವೇಶ, ಮಹಾಪೂಜೆ ಜರಗಲಿದೆ.
ನಾಳಿನ ಕಾರ್ಯಕ್ರಮ: ಬೆಳಿಗ್ಗೆ 8ಗಂಟೆಗೆ :ನಿತ್ಯಪೂಜೆ,ಶ್ರೀ ದೇವಿಗೆ ವಿಶೇಷ ಪೂಜೆ, ಪೂರ್ವಾಹ್ನ ಗಂಟೆ 10ಕ್ಕೆ : ಶ್ರೀ ಗುಳಿಗ ದೈವದ ಕೋಲ, ಸಂಜೆ ಗಂಟೆ 3ಕ್ಕೆ: ಸಮಾರೋಪ ಸಮಾರಂಭ,ಗೌರವಾರ್ಪಣೆ, ಸೇವಾಕತೃಗಳಿಗೆ ಸನ್ಮಾನ ಜರಗಲಿದೆ.


