ಮುಳ್ಳೇರಿಯ: ಪ್ರತಿಷ್ಠಿತ 2019 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ, ನೇತ್ರ ತಜ್ಞ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರನ್ನು ಬಂದಡ್ಕ ಶ್ರೀ ರಾಮನಾಥ ದೇವಳ ಟ್ರಸ್ಟ್‍ನ ವತಿಯಿಂದ ಶ್ರೀ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕದ ದಿನದಂದು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ್ ಅವರು ಶಾಲು ಹೊದಿಸಿ, ಸ್ಮರಣಿಕೆ, ಸಮ್ಮಾನಪತ್ರವನ್ನು ನೀಡಿ ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂದಡ್ಕ ಶ್ರೀ ರಾಮನಾಥ ದೇವಳ ಟ್ರಸ್ಟ್‍ನ ಅಧ್ಯಕ್ಷರಾದ ರಘುರಾಮ ರಾವ್ ಉಡುಪಿ ವಹಿಸಿದರು. ರವಿ ಮಂಗಳೂರು ಸ್ವಾಗತಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಸತೀಶ್ ದೋಣಿಬಾಗಿಲು ವಂದಿಸಿದರು.


